Social media manipulation and trend management of Kathua incident

I have no soft corner for any heinous criminals. Nor do I support the heinous crimes of journalists of crying wolf, at a time that suits them. But, this guy @WrongDoc on Twitter just spent 30 minutes and was able to call the bluff around this crime and the media/political propaganda, which is being spun to make fools out of common citizens. Read on!

See how the Kathua twitter activity started trending – how this is a social media manipulation and trend management.

I checked the Twitter Trend statistics for and found that it peaked interest late on 9th April 2018. The day ‘s farce of a fast was ridiculed. The Kathua case happened in January 2018.

This is the last three months twitter activity of Kathua hashtag. The crime was discovered and first arrest made on 19th January- so it takes in account the whole timeline. See when the interest peaked?

DaqjXfyU0AA7LIm

The Twitter activity started with This tweet according to analysis. The handle belongs to a journalist who works for – which is run by . This was the kindling.

Next influential tweet about Kathua comes from Barkha. Then and then you can see the following order.

These are the handles that chronologically followed tweeting in synchronicity about Kathua, after this dog whistle was sent out from Print Journo of Shekhar Gupta and Barkha of Quint.

Tweet activity started as clockwork with synchronised timing at 2:30 pm (time zone reference may change actual time) on 12th and 13th April. On 12th April by 7:30 pm the activity was dead but by 13th it grew into real people outraging- the manipulation was successful.

I again checked the chronicity of tweets for last 3 months- to include the full timeline of the crime’s course. No significant interest in twitter outrage before trigger on 9th and 10th.

This is the world-map of influence about Kathua tweets in last 3 months. Interestingly, Russia features here!

DaqrWgKVwAA2EAW

As I give it some time, Turkey, Kazakhstan, Ukraine, Senegal, Nigeria, Saudi Arabia, Iran, Pakistan (naturally!) Phillipines also start lighting up on the tracker.

DaqtLZVU8AAQIdZ

I’m not discrediting or denying your emotions and rage about the Kathua case. You are right to feel angry, I feel much the same. But what exactly are you angry about? Who are you letting use your anger?

Blood and bones of Asifa Bano are being ground up to fertilize your anger, your emotions. Your anger and emotions are being harvested to feed the political hunger of people who go on symbolic fast. Don’t feed their greed now, or they sure will sacrifice another one another day.

This emotional manipulation and outrage harvest are the tools of social media propaganda. This is what Zuckerberg admitted to selling. This is what Twitter is doing, knowingly or otherwise. This is why there was a Hand on the wall of the Cambridge Analytica office.

Don’t you feel fucking stupid, outraging about Cambridge Analytica one day and falling victim to engineered social media outrage harvesting your emotions over the carcass of a child the very next day? Did you think the data harvesters wanted to see your selfies??

All credits of this write-up go to Be’Havin!‏ @WrongDoc.

ಬಹುಷಃ ನನಗೇ ಈ ಶೋಷಣೆ, ಸಮಾನತೆ, ಸಹಪಂಕ್ತಿ ಇವೆಲ್ಲಾ ಅರ್ಥವಾಗೊಲ್ಲ.

ಯಾಕಂದ್ರೆ ನಮ್ಮೂರಲ್ಲಿ ದೇವಸ್ಥಾನಕ್ಕೆ ಒಳಗೆ ಬಿಡೋದ್ರ ಬಗ್ಗೆ ಗಲಾಟೆಯೇ ಇಲ್ಲ. ಶೃಂಗೇರಿ ಅಂತಲ್ಲ, ಸುತ್ತ ಮುತ್ತಲಿನ ಯಾವೂರಿನಲ್ಲೂ ‘ಏಯ್ ಹೊರಗೆ ಹೋಗೋ, ದೇವಸ್ಥಾನದೊಳಗೆ ನೀನು ಬರೋ ಹಾಗಿಲ್ಲ’ ಅನ್ನಲ್ಲ. ಅಲ್ಲಿ ಜನರನ್ನ ಹೊರಗಿಡೋದು ಬಿಡಿ, ಉಲ್ಟಾ, ಕೆಲವಷ್ಟು ಕೆಲಸಗಳಿಗೆ ಕೆಲಜನರು ಬರದಿದ್ರೆ ಮುಖ್ಯ ಕೆಲಸಗಳೇ ನಡೀತಾ ಇರ್ಲಿಲ್ಲ. ಉದಾಹರಣೆಗೆ, ಭೋವಿ ಜನಾಂಗದ ಜನರು ಬಂದು ಪಲ್ಲಕ್ಕಿ ಹೊರ್ಲಿಲ್ಲ ಅಂದ್ರೆ, ಸಾರದಬಾಗಿಲಿನಿಂದ ಜನ ಬಂದು ದೀಪ, ದೀವಟಿಗೆ, ಚಾಮರ ಹಿಡೀಲಿಲ್ಲ ಅಂದ್ರೆ ನವರಾತ್ರಿಯ ಅಡ್ಡಪಲ್ಲಕ್ಕಿಯ ಉತ್ಸವವೇ ನಡಿತಾ ಇರ್ಲಿಲ್ಲ. ಅವತ್ತಿನ ಮಟ್ಟಿಗೆ ನಾನಂತೂ ಅದನ್ನ ಶೋಷಣೆ ಅಂತಾ ಅಂದ್ಕೊಳ್ಳಿಲ್ಲ. ಉಲ್ಟಾ ಅದು ನಮ್ಮ ಐಡೆಂಟಿಟಿಯಾಗಿತ್ತು. ಇವತ್ತಿನ ಹುಡುಗ್ರು ಏನಂದ್ಕೊಳ್ತಾರೋ ಗೊತ್ತಿಲ್ಲಪ್ಪ. ಶೃಂಗೇರಿಯಲ್ಲಂತೂ ಬುರ್ಖಾ ಹಾಕಿಕೊಂಡೇ ಕೆಲ ಹೆಣ್ಣುಮಕ್ಕಳು ದೇವಸ್ಥಾನದಲ್ಲಿರೋ ಮೀನುಗಳಿಗೆ ಮಂಡಕ್ಕಿ ತಿನ್ಸೋಕೆ ಬಂದಿರೋದನ್ನ ನೋಡಿದ್ದೇನೆ. ದೇವಸ್ಥಾನವೆಂದರೆ ನಾಲ್ಕು ಜನ ಸೇರೋ ಜಾಗ ಅಂದುಕೊಂಡು ಬೆಳೆದ ನನಗೆ ಶೋಷಣೆಯ ಆಂಗಲ್ಲೇ ಹೊಳೆಯಲಿಲ್ಲ. ಅದೂ ಅಲ್ದೆ ‘ತಿಂಗಳ ಆ ದಿನಗಳಲ್ಲಿ’ ದೇವಸ್ಥಾನದೊಳಗೆ ಹೋಗದ ನನ್ನ ಅತ್ತೆಯಂದಿರು, ಉತ್ಸವ ಮೂರ್ತಿ ಹೊರಗೆ ಬಂದಾಗ ಕೈಮುಗಿದು ‘ನೋಡು ನಾವು ಒಳಗೆ ಹೋಗದಿದ್ರೇನಂತೆ, ಶಾರದಮ್ಮನೇ ಹೊರಗೆ ಬಂದು ನಮಗೆ ದರ್ಶನ ಕೊಟ್ಲು’ ಅಂತಾ ಹೇಳಿದ್ದು ನನಗೆ ತಮಾಷೆ ಎನ್ನಿಸಲೇ ಇಲ್ಲ. ಅವೊಂತರಾ pradigm shift ಮಾಡುವಂತಾ ಮಾತುಗಳಾಗಿಬಿಟ್ಟವು. ಆದರೂ ಕೆಲವರು ‘ನಮ್ಮನ್ನು ದೇವಸ್ಥಾದೊಳಕ್ಕೆ ಬಿಡಲಿಲ್ಲ’ ಅಂತಾ ಹೋರಾಟ ಮಾಡುವಾಗ ನನಗೆ ಆಶ್ಚರ್ಯವಾಗುತ್ತೆ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಚೆನ್ನಾಗಿ ಓದಿ, ಪಾಸಾಗೋ ತಾಕತ್ತಿರೋ ಮಕ್ಕಳಿಗೆ, ಸರ್ಕಾರಿ ಶಾಲೆಗಳಲ್ಲಿ, ಅತೀಕಡಿಮೆ ಫೀಜಿನಲ್ಲಿ ಓದೋ ಸೌಕರ್ಯ ನನ್ನ ಕಾಲದಲ್ಲಂತೂ ಇತ್ತು. ನಾನೋದಿದ ಸರ್ಕಾರೀ ಹೈಸ್ಕೂಲಿನಲ್ಲಿ ಕನ್ನಡ, ಇಂಗ್ಳೀಷ್ ಮತ್ತು ಸಂಸ್ಕೃತ ಮೂರನ್ನೂ ಫಸ್ಟ್ ಲ್ಯಾಂಗ್ವೇಜಾಗಿ ತಗೊಳ್ಳೋ ಆಯ್ಕೆಇತ್ತು. ಒಳ್ಳೆಯ ಟೀಚರ್ರುಗಳೂ ಇದ್ರು. ಓದಿ ಪಾಸಾಗೋ ತಾಕತ್ತಿದ್ದರೆ ಸಂಸ್ಕೃತನಾದ್ರೂ ಓದ್ಕಳಿ, ವೇದೋಪನಿಷತ್ತಾದ್ರೂ ಓದ್ಕಳಿ, ಶೇಕ್ಸ್ಪಿಯರ್ರಾದ್ರೂ ಓದ್ಕಳಿ ಅನ್ನೋ ಸ್ಥಿತಿ ನನ್ನೂರಲ್ಲಿತ್ತು. ಶತಮಾನಗಳ ಹಿಂದೆ ಏನು ನಡೆದಿತ್ತೋ ಗೊತ್ತಿಲ್ಲ, ನನ್ನ ಕಾಲಕ್ಕೆ ಸಂಸ್ಕೃತ ಓದಬೇಕು ಅಂದ್ಕೊಂಡವರ ಕಿವಿಗೆ ಕಾದ ಸೀಸ ಹುಯ್ಯುವ ಪದ್ದತಿಯಂತೂ ಇರಲಿಲ್ಲ. ವರ್ಷವಿಡೀ ದೇವಸ್ಥಾನದ ಸುಪ್ರಭಾತವನ್ನೇ ಕೇಳಿ ಎದ್ದೇಳುತ್ತಿದ್ದ ನಮಗೆ, ಹಬ್ಬದ ಸಮಯದ ರಾತ್ರಿಯ ದರ್ಬಾರಿನಲ್ಲಿ ಪಾಠಶಾಲೆಯ ಹುಡುಗರ ವೇದಪಠನಗಳ ಕಾರ್ಯಕ್ರಮ ಕೇಳಿಯೇ ಬೆಳೆದ ನಮಗೆ, ಸಂಸ್ಕೃತದ ಬಗ್ಗೆ ಯಾವ ದ್ವೇಷವೂ ಬೆಳೆಯಲಿಲ್ಲ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ದೇವಸ್ಥಾನಕ್ಕೆ ಹೋಗೋದು ಅಂದ್ರೆ ನಮ್ಮನೆಯಲ್ಲಿ (ನಮ್ಮ ಸುತ್ತಲಿನ ಮನೆಗಳಲ್ಲೂ) ಸಂಭ್ರಮ. ಪೇಟೆ, ಅಲ್ಲಿನ ಲೈಟು, ಹೋಟೆಲ್ಲಿನ ಪರಿಮಳ, ದೇವಸ್ಥಾನದ ಘಂಟೆ, ಆನೆ, ಹೊಳೆ, ಅದರಾಚೆಗಿನ ನರಸಿಂಹವನ ಎಲ್ಲವೂ ಪುಳಕಗೊಳ್ಳುವ ಅನುಭವ. ಮಠದಲ್ಲಿ ಸಿಗುತ್ತಿದ್ದ ಊಟವಂತೂ ಆ ದಿನದ ಮುಖ್ಯ ಆಕರ್ಷಣೆ. ಅದು ಪ್ರಸಾದವೋ, ಊಟವೋ ಅಂತೆಲ್ಲಾ ತಲೆಕೆಡಿಸುಕೊಳ್ಳುವಷ್ಟು ವ್ಯವಧಾನ ಕೂಲಿ ಮಾಡಿ ಬದುಕುತ್ತಿದ್ದ ನಮ್ಮಜ್ಜನ ಮನೆಯಲ್ಲಿ ಬೆಳೆದ ನಮಗಿರಲಿಲ್ಲ. ಮನೇಲೇ ಊಟಮಾಡಿದ್ರೆ ಹಲಸಿನಕಾಯಿ ಕೊಚ್ಚಿ ಉಪ್ಪು ಹಾಕಿಕೊಂಡೋ ಅಥವಾ ಕುಚ್ಚಲಕ್ಕಿ ಗಂಜೀನ ಉಪ್ಪಿನ್ಕಾಯಿ ನೆಂಚ್ಕೊಂಡೋ ತಿನ್ನುವ ಪರಿಸ್ಥಿತಿ ಇದ್ದ ನಮಗೆ, ಮಠದಲ್ಲಿ ಸಿಗುತ್ತಿದ್ದ ಅನ್ನ, ತಿಳಿಸಾರು, ಸಾಂಬಾರು ಮೃಷ್ಟಾನ್ನಕ್ಕೂ ಮಿಗಿಲು. ಸಿಗುವ ಊಟದ ಮೇಲೆ ನಮ್ಮ ಗಮನವೇ ಹೊರತು, “ಅಯ್ಯೋ! ಅಲ್ನೋಡ್ರೋ ಭಟ್ರಿಗೇ ಬೇರೆ ಊಟ!!” ಅಂತಾ ಆಶ್ಚರ್ಯಪಡುವಷ್ಟೆಲ್ಲಾ ಬಾಯಿಬಿಡುವಷ್ಟು ಸಮಯವಿರಲಿಲ್ಲ. ಆಚೆ ಈಚೆ ನೋಡದೇ ತಿಂದ್ರೆ ಇನ್ನೂ ಎರಡು ತುತ್ತು ಹೆಚ್ಚು ತಿನ್ನಬಹುದು, ಬಹುಷಃ ರಾತ್ರಿಯೂಟದ ಖರ್ಚೂ ಮಿಗುತ್ತದೆಂಬ ಲೆಕ್ಕಾಚಾರ ಅದಾಗಲೇ ನಮ್ಮ ಮನಸ್ಸಿನಲ್ಲಿತ್ತು. ನವರಾತ್ರಿ ಬಂದ್ರೆ ನಮ್ಮ ಕೆ.ವಿ.ರಾಮಪ್ಪಯ್ಯ ರಸ್ತೆಯಲ್ಲಿ (ಆಗ ಅದು ಕುರುಬಕೇರಿಯಾಗಿತ್ತು, ಒಬ್ಬ ಕುರುಬನೂ ಇಲ್ಲದಿದ್ರೂ ಸಹ tongue emoticon ) ಯಾರಮನೆಯಲ್ಲೂ ಅಡುಗೆಯೇ ಮಾಡ್ತಿರಲಿಲ್ಲ ಅನ್ನೋದೊಂದು ಸಹಜವಾದ ಜೋಕಾಗಿತ್ತು. ಯಾಕಂದ್ರೆ ಮಠದಲ್ಲಿ ಭೂರಿಭೋಜನ! ಒಂಬತ್ತೂ ದಿನ!! ಅದೂ ಮಧ್ಯಾಹ್ನ, ರಾತ್ರಿ ಎರಡೂ ಹೊತ್ತು!!! ಸಹಪಂಕ್ತಿ ಭೋಜನದ ಬಗ್ಗೆ ಯೋಚಿಸಲು ಪ್ರಾರಂಭವಾಗಿದ್ದೇ, ಮನೆಕಡೆಯ ಸ್ಥಿತಿ ಸ್ವಲ್ಪ ಆರ್ಥಿಕವಾಗಿ ಉತ್ತಮವಾದಾಗ. ಆಗ ದೇವಸ್ಥಾನದ ಊಟ ನಮಗೆ ಅವಶ್ಯಕತೆಯಾಗಿರಲಿಲ್ಲ, ಬರೀ ಅನುಭವವಾಗಿ ಬದಲಾಗಿತ್ತು. ಆಗ, “ಅದ್ಯಾಕೆ ಅವರಿಗೆ ಬೇರೆ ಊಟ? ನಾವೂ ಅಲ್ಲಿಗೇ ಹೋಗೋಣ ಬಾರೋ ಚೇತು” ಅಂತಾ ನನ್ನ ತಮ್ಮನ್ನೂ ಎಳ್ಕೊಂಡು ಹೋಗಿ ‘ಜನಿವಾರ ಎಲ್ಲೋ?’ ಅಂತಾ ಅನುಮಾನದಿಂದ ನೋಡಿದವರೆಡೆಗೆ, ‘ಇನ್ನೂ ಉಪನಯನ ಆಗಿಲ್ಲ’ ಅನ್ನೋ ಉತ್ತರ ಎಸೆದು, ಅಲ್ಲಿ ಕೂತು ಊಟ ಮಾಡಿದ ಮೇಲೆ ‘ಪಾಯಸ ಒಂದು ಎಕ್ಸ್ಟ್ರಾ ಇದೆ ಅನ್ನೋದು ಬಿಟ್ರೆ, ಇಲ್ಲೇನಿದೆ ಮಣ್ಣು!? ಇಲ್ಲೂ ಅದೇ ಊಟ’ ಅಂತಾ ಬೈಕೊಂಡು ಬಂದ್ವಿ. ಅವರ ಕಾಲಿಗೆ ಕಾಲು ತಾಗಿಸಿ ಊಟ ಮಾಡಿಬಂದ ಅವತ್ತಿಂದ ಇವತ್ತಿನವರೆಗೂ ಸಹಪಂಕ್ತಿ ಭೋಜನ ನನಗೆ ತಲೆಕೆಡಿಸಿಕೊಳ್ಳೋ ವಿಚಾರವೇ ಅಲ್ಲ. ಅದಕ್ಕೋ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಊರಲ್ಲಿದ್ದವರಷ್ಟೂ ಜನ ಕೈಯೋ ಕಾಲೋ ಉಳುಕಿದರೆ, ಅಜ್ಜಯ್ಯನ ಹತ್ರ ಎಣ್ಣೆ ಉಜ್ಜಿಸಿಕೊಳ್ಳೋಕೆ ಬಂದಾಗ, ಯಾರೂ “ನಿಮ್ ಮನೆ ಒಳಗೆ ನಾನು ಬರಲ್ಲ, ನೀನೇ ಮನೆಗೆ ಬಾರೋ ವೆಂಕಟ್ರಾಮು” ಅಂತಲೋ ಅಥವಾ “ನಾನು ಬ್ರಾಹ್ಮಣ ಕಣಯ್ಯಾ. ನನ್ನನ್ನ ಮುಟ್ಟದೇ ಎಣೆ ತಿಕ್ಕು” ಅಂತಾ ಅನ್ಲಿಲ್ಲ. ಗ್ರಹಚಾರ ಕೈಕೊಟ್ಟು ಸೊಂಟ ಹಿಡ್ಕೊಂಡಾಗ, ಅದನ್ನ ಸರಿಮಾಡೋಕೆ ಯಾವ ಜಾತಿಯೂ ಅಡ್ಡಬರಲ್ಲ ಅನ್ನೋದನ್ನ ಅಜ್ಜ ಅದಾಗಲೇ ಕಲಿಸಿಬಿಟ್ಟಿದ್ದರು. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.
ಒಂದೇ ಒಂದು ವರ್ಷ (ಬಹುಷಃ 1993 ಇರಬೇಕು) ನಾನು ಏಪ್ರಿಲ್ 14ರಂದು ‘ಅಂಬೇಡ್ಕರ್ ದಿನಾಚರಣೆ’ ಪ್ರಯುಕ್ತ ನಡೆದ ‘ಪ.ಜಾ ಮತ್ತು ಪ.ಪಂ ಗಳ ಆಟೋಟ ಸ್ಪರ್ಧೆ’ಗೆ ಹೋಗಿದ್ದು. ಶಾಟ್-ಪುಟ್, 400ಮೀ ಓಟ, ಚರ್ಚಾಸ್ಪರ್ಧೆ ಮೂರರಲ್ಲಿ ಮೊದಲಬಹುಮಾನವಾಗಿ ಮೂರು ಸ್ಟೀಲ್ ಪ್ಲೇಟ್ ಗೆದ್ದಿದ್ದಕ್ಕೆ, ಅದ್ಯಾರೋ ಮಹಾಶಯ ‘ನೋಡಯ್ಯಾ! ನೀನೂ ಕೂಡ ಗೆಲ್ಲಬಹುದು ಅಂತಾ ಗೊತ್ತಾಯ್ತಾ? ನಾಳೆ ಕ್ಲಾಸಿಗೆ ಇದನ್ನ ತಗಂಡು ಹೋಗಿ ತೋರ್ಸು ಎಲ್ಲರಿಗೂ. ಅವ್ರಿಗೂ ಗೊತ್ತಾಗ್ಲಿ, ನೀನು ಹಿಂದುಳಿದವನಲ್ಲ, ನೀನೂ ಸಹ ಗೆಲ್ಲೋ ಕುದುರೆ ಅಂತಾ’ ಅಂದ. ನಮ್ಮ ಮನಸ್ಸುಗಳೊಳಗೇ ನಾವೆದಷ್ಟು ಹಿಂದುಳಿದಿದ್ದೇವೆ ಅಂತಾ ಗೊತ್ತಾಗಿದ್ದೇ ಅವತ್ತಿನ ಭಾಷಣಗಳನ್ನು ಕೇಳಿದ ನಂತರ! ಅದೇ ಕೊನೆ, ಇನ್ಮೇಲೆ ಹಿಂದುಳಿಯಬಾರದು ಅಂತಾ ನಿರ್ಧರಿಸಿ ಆ ಕಾರ್ಯಕ್ರಮಕ್ಕೇ ಬಹಿಷ್ಕಾರ ಹಾಕಿದೆ. ಅಮೇಲಿಂದ ನಾನು ಹಿಂದುಳಿಯಲೇ ಇಲ್ಲ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಅಂಬೇಡ್ಕರ್ ಬಗ್ಗೆ ಪ್ರತಿವರ್ಷವೂ ಕನ್ನಡ ಹಿಂದಿ ಇಂಗ್ಳೀಷ್ ಮೂರೂ ಲ್ಯಾಂಗ್ವೇಜಿನಲ್ಲಿ ಮೂರನೇ ಕ್ಲಾಸಿನಿಂದ ಹತ್ತನೇ ಕ್ಲಾಸಿನ ತನಕ (3×8) ಇಪ್ಪತ್ತನಾಲ್ಕು ಪಾಠಗಳನ್ನು ಓದಿಮುಗಿಸುವುದು ಬದಿಗಿರಲಿ, ಇನ್ನೂ ಓದಲು ಪ್ರಾರಂಭಿಸುವ ಮುಂಚೆಯೇ, ನನ್ನಪ್ಪ ಅಮ್ಮ, ನನ್ನ ಇಬ್ಬರು ಅಜ್ಜಂದಿರೂ ‘ವಿದ್ಯೆಯೊಂದೇ ನಿನ್ನನ್ನು ಲಿಬರೇಟ್ ಮಾಡಲು ಸಾಧ್ಯ’ವೆಂಬುದನ್ನು ಹೇಳಿಕೊಟ್ಟಾಗಿತ್ತು. ಲಿಬರೇಟ್ ಅನ್ನೋ exact ಪದವನ್ನು ಅವರು ಬಳಕೆ ಮಾಡದಿದ್ರೂ ‘ನನ್ನ ತರಹಾ ನೀನಾಗಬೇಡ ಮಗಾ’ ಅಂತಾ ಅವರು ಹೇಳಿದ ಮಾತಿಗೆ ಬೇರೆ ಯಾವ ಅರ್ಥವನ್ನೂ ನಾನು ಕೊಡಲಾರೆ. ಅಂಬೇಡ್ಕರ್ ಮತ್ತವರ ಹೋರಾಟದ ಪರಿಕಲ್ಪನೆ ಇನ್ನೂ ಮನಸ್ಸಿನಲ್ಲಿ ಮೂಡುವ ಮುನ್ನವೇ ಅಸ್ಪೃಶ್ಯತೆಯೆಂಬುದರ ಬಗ್ಗೆ, ಅಸ್ಪೃಷ್ಯತೆಯೆಂಬುವುದು ಅದೆಂತಾ ಅಸ್ಪೃಷ್ಯ ವಿಚಾರವೆಂದು ತಿಳಿಸಿಕೊಟ್ಟಿದ್ದು ಮತ್ತು ಅದರಿಂದ ಹೊರಬರಬೇಕಾದ ಅಗತ್ಯತೆಯ ಬಗ್ಗೆ ನನ್ನ ಗ್ರಹಿಕೆಯನ್ನೇ ಬದಲಾಯಿಸಿದ್ದು ಈ ನಾಲ್ಕು ಜನ. (ಅದನ್ನು ಬೇರೆಯೇ ಹಂತಕ್ಕೆ ಒಯ್ದಿದ್ದು ನಾನೇ ಬಿಡಿ 😉 ಎಲ್ಲಾ ಕ್ರೆಡಿಟ್ಟು ಅವರಿಗೇ ಯಾಕೆ ಕೊಡೋಣ 😛 ) ಆದ್ರೂ ಏನೋಪ್ಪ ನನಗೆ ಈ ಹೋರಾಟಗಳೆಲ್ಲಾ ಅರ್ಥವಾಗೊಲ್ಲ.

ನನ್ನಜ್ಜಪ್ಪಮ್ಮಂದಿರು ಹೇಳಿಕೊಟ್ಟ ‘ವಿದ್ಯೆಯೊಂದೇ ನಿನ್ನನ್ನು ಲಿಬರೇಟ್ ಮಾಡಲು ಸಾಧ್ಯ’ ಎಂಬ ಮಾತನ್ನು ಅಂಬೇಡ್ಕರ್ ಕೂಡಾ ಹೇಳಿದ್ರು ಅಂತಾ ಗೊತ್ತಾಗಿದ್ದು ಎಂಟನೇ ಕ್ಲಾಸಿನಲ್ಲಿ. ಅಷ್ಟೊತ್ತಿಗಾಗಲೇ ನನ್ನ ಮಟ್ಟಿಗೆ ಅಸ್ಪೃಷ್ಯತೆಯ ಕಾನ್ಸೆಪ್ಟೇ ಹಳ್ಳ ಹಿಡಿದಾಗಿತ್ತು. ನನ್ನ ಸ್ನೇಹಿತರೆಲ್ಲ ನನಗೇ ಗೊತ್ತಿಲ್ಲದಂತೇ ಹೆಚ್ಚೂ ಕಡಿಮೆ ಬ್ರಾಹ್ಮಣರೇ ಆಗಿ ಹೋಗಿದ್ದರು. ಎಲ್ಲರ ಮನೆಯ ಅಡುಗೆ ಮನೆಗೇ ಹೋಗಿ ಊಟ ಮಾಡಿ ಬರ್ತಾ ಇದ್ದೆ. ಆ ನನ್ನ ಅಮ್ಮಂದಿರುಗಳಲ್ಲಿ ಯಾರೂ ಸಹ ‘ಏಯ್ ಒಳಗೆ ಬರ್ಬೇಡ’ ಅನ್ಲಿಲ್ಲ, ‘ತಟ್ಟೆ ತೊಳೆದಿಟ್ಟು ಹೋಗು’ ಅನ್ಲಿಲ್ಲ. ನನ್ನ ಮೊದಲ ಮತ್ತು ಕೊನೆಯ ಗರ್ಲ್-ಪ್ರೆಂಡುಗಳೂ ಬ್ರಾಹ್ಮಣರ ಮನೆಯ ಹುಡುಗಿಯರೇ 😉 ಮನುಷ್ಯನಾಗಿ ಬೆಳೆಯಲು ನನಗೆ ಅವೆಲ್ಲಾ ಯಾವತ್ತೂ ಅಡ್ಡಿ ಬರಲೇ ಇಲ್ಲ. ತಲೆಯಲ್ಲಿ ಸರಸ್ವತಿ ನೆಲೆಸಿಯಾಗಿತ್ತು. ಅವಳಿದ್ದಲ್ಲಿ ಇನ್ನು ಅಸ್ಪೃಷ್ಯತೆಯೆಲ್ಲಿ!!!? ಅದಕ್ಕೇ ಇರಬೇಕು ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಸಣ್ಣಕ್ಕಿದ್ದಾಗಲಿಂದಲೂ ಇದನ್ನು ನೋಡಿ ನೋಡಿ ಅಭ್ಯಾಸ ಆಗಿರೋ ನನಗೆ ದೇವಸ್ಥಾನದೊಳಗೆ ಪ್ರವೇಶ ಸಿಗಲಿಲ್ಲ ಅಂತಾ ಕೆಲವರು ಮಾಡೋ ಹೋರಾಟ, ಸಂಸ್ಕೃತ ಕಲಿಯೋಕೆ ಬಿಡ್ಲಿಲ್ಲ, ಶೋಷಿಸಿದ್ರು ಅನ್ನೋ ಮಾತುಗಳೇ ಅರ್ಥವಾಗಲ್ಲ. ಹಾಗಂತಾ ಇವೆಲ್ಲಾ ಸರಿಯಲ್ಲ ಅಂತಾ ನಾನು ಹೇಳೋಲ್ಲ. ಕೆಲವುಕಡೆ, ಕೆಲ ಮೂರ್ಖರು ಕೆಲಜನರನ್ನು ದೇವಸ್ಥಾನದೊಳಗೆ ಬಿಡದೇ ಸತಾಯಿಸಿರುವ ಘಟನೆಗಳು ನಡೆದಿವೆ, ನಡೀತಾ ಕೂಡಾ ಇವೆ. ಆದರೆ ಅಲ್ಲಿ ನಡೆದಿರೋ ಅನ್ಯಾಯವನ್ನ ಸಂಸ್ಕೃತ ಕಲಿತು ಅಥವಾ ಸಹಪಂಕ್ತಿ ಭೋಜನ ಮಾಡುವುದರ ಮೂಲಕ ಸರಿಪಡಿಸಲಾಗುವುದಿಲ್ಲ. ಹೆಚ್ಚೆಂದರೆ ನಿಮ್ಮಜ್ಜನ ಪಾಲಿನ ಸೇಡು ನೀವು ತೀರಿಸಿಕೊಳ್ಳಬಹುದಷ್ಟೇ. ಅದಕ್ಕಿಂತಾ ಹೆಚ್ಚು ಕಡಿದು ಕಟ್ಟಿಹಾಕುವುದೇನೂ ಇಲ್ಲ. ನಿಜವಾಗಿಯೂ ನಡೆದ ಅನ್ಯಾಯವನ್ನು ಸರಿಪಡಿಸಬೇಕಾದರೆ, ಕಲಿಯಬೇಕಾದದ್ದು ವಿದ್ಯೆ. ಅದೊಂದೇ ಈ ಎಲ್ಲಾ ರೋಗಗಳಿಗೂ ಮದ್ದು. ಸರಸ್ವತಿ ಯಾವ ಯೂನಿವರ್ಸಿಟಿಯಲ್ಲಿ ಓದಿದ್ದಾಳೆ? ಅವಳದೆಷ್ಟು ಡಿಗ್ರಿ ಪಡೆದಿದ್ದಾಳೆ!? ಎಂದು ಪ್ರಶ್ನಿಸಿದವರು ಹೆಚ್ಚೆಂದರೆ ಅಕ್ಷರಸ್ಥರಾಗಬಹುದೇ ಹೊರತು ವಿದ್ಯೆಕಲಿತವರಾಗುವುದಿಲ್ಲ. ಅಂತವರು ಈ ಅಸ್ಪೃಷ್ಯತೆಯ ಸುಳಿಯಿಂದ ಹೊರಬರುವುದೂ ಇಲ್ಲ. ಬಹುಷಃ ಅವರಿಗೂ ಅದರಿಂದ ಹೊರಬರುವ ಇಚ್ಚೆಯೂ ಇಲ್ಲ. ಅವರಿಗೇನಿದ್ದರೂ ‘ಅಯ್ಯೋ ನೋಡ್ರೀ! ನಮ್ಮನ್ನ ಅದೆಷ್ಟು ತುಳಿದಿದ್ದಾರೆ!!!” ಅಂತಾ ಕೂಗಾಡಿ, ಒಂದೆರಡು ಪುಸ್ತಕ ಬರೆದು, ಭಗವಾನರಿಂದ ಮುನ್ನುಡಿ ಬರೆಸಿ (ಕು)ಪ್ರಸಿದ್ಧರಾಗುವ ಅವರ ಗುರಿಯಿದೆಯೇ ಹೊರತು, ಅಸ್ಪೃಷ್ಯತೆಯ ನಿರ್ಮೂಲನೆಯಲ್ಲ.

ಅದಕ್ಕೇ ಇರಬೇಕೇನೋ “ಏನೋಪ್ಪ ನನಗೆ ಇವೆಲ್ಲಾ ಅರ್ಥವೇ ಆಗೊಲ್ಲ.”

ವೈಜ್ಞಾನಿಕತೆಯೆಂದರೆ ಬರೀ ಸಲ್ಫ್ಯೂರಿಕ್ ಆಸಿಡ್ಡಿನ ಫಾರ್ಮುಲಾ ತಿಳಿಯುವುದಲ್ಲ….

ದಿನದಲ್ಲಿ ಕನಿಷ್ಟ ಪಕ್ಷ ಎರಡು ಘಂಟೆ ಫೇಸ್ಬುಕ್ಕಿನಲ್ಲೇ ಕಳೆಯುವ ನನಗೆ, ಎರಡು ದಿನದ ಹಿಂದೆ ಸ್ವಘೋಷಿತ ಬುದ್ಧಿಜಿವಿಯೊಬ್ಬರು ಹಾಕಿದ ಸ್ಟೇಟಸ್ ಗಮನ ಸೆಳೆಯಿತು. ಅವರ ಮನೆಗೆ ಪಾಪ ಕೆಲ ಮಕ್ಕಳು ಗಣೇಶ ಕೂರಿಸಲು ಚಂದಾ ಕೇಳಲು ಬಂದಿದ್ದರಂತೆ. ಆ ಮಕ್ಕಳಿಗೆ ಈ ಮಹಾಶಯರು “ಯಾರು ಈ ಗಣೇಶ? ದೇವರಾ? ಅವನು ಹುಟ್ಟಿದ್ದು ಯಾರಿಗೆ? ಪಾರ್ವತಿಯ ಮೈ ಮೇಲೆ ಅಷ್ಟೊಂದು ಜಿಡ್ಡಿತ್ತಾ? ಗಣೇಶನಿಗೆ ಆನೆಯ ಮುಖ ಬಂದಿದ್ದು ಹೇಗೆ? ಗಣೇಶನ ತಲೆಯನ್ನು ಶಿವ ಕಡಿದಾಗ ಅವನ ವಯಸ್ಸು ಎಷ್ಟಾಗಿತ್ತು? ಅಂತಹ ಚಿಕ್ಕ ಹುಡುಗನ ದೇಹಕ್ಕೆ ದೊಡ್ಡದಾದ ಆನೆಯ ತಲೆ ಅಂಟಿಸಿದ್ದು ಹೇಗೆ? ಗಣೇಶ ಆನೆಯಾದರೆ ಅವನ ವಾಹನ ಇಲಿಯ ಮೇಲೆ ಅವನು ಕೂತಾಗ ಅದು ಅಪ್ಪಚ್ಚಿಯಾಗಲ್ವಾ!? ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬುಗೊಳಿಸಿದೆ” ಅಂತಾ ವಿಜಯಪತಾಕೆಯನ್ನು ಹಾರಿಸಿದ್ದರು. ಸ್ವತಃ ತಮ್ಮನ್ನು ವಿಚಾರವಾದಿಯೆಂದು ಕರೆದುಕೊಳ್ಳುವ ಇವರ ಪ್ರವರವನ್ನು ಕೇಳಿ ನನಗೆ ನಿಜವಾಗಿಯೂ ಇದೆನಾ ವೈಚಾರಿಕತೆ, ವೈಜ್ಞಾನಿಕ ಚಿಂತನೆ ಎಂದರೆ!? ಅಂತಾ ಗಾಬರಿಯಾಯ್ತು. ಇದೇ ವೈಚಾರಿಕತೆಯೆಂದಾದರೆ ನಮ್ಮನ್ನು ನಾವು ವೈಚಾರಿಕರು ಎಂದು ಕರೆದುಕೊಳ್ಳುವ ಮುನ್ನ ಇನ್ನೊಮ್ಮೆ ಯೋಚಿಸಬೇಕಾಗಬಹುದೇನೋ. ಇದೇ ವೈಜ್ಞಾನಿಕ ಚಿಂತನೆಯೆಂದಾದರೆ ನಾನು ಮೂರು ವರ್ಷ ಬಿಎಸ್ಸಿಗೆ ಮಣ್ಣು ಹೊತ್ತದ್ದು ವ್ಯರ್ಥವಾಯಿತಲ್ಲಾ ಎಂದು ಯೋಚಿಸುತ್ತಿದ್ದಾಗ ನನಗನ್ನಿಸಿದ್ದು:

 

ವೈಚಾರಿಕತೆ ಅಂದ್ರೆ ಬರೀ “ಗಣೇಶಂಗೆ ಆನೆ ತಲೆ ಎಲ್ಲಿಂದ ಬಂತು? ಇಲಿ ಮೇಲೆ ಆನೆ ಕೂತ್ರೆ, ಇಲಿ ಅಪ್ಪಚ್ಚಿ ಆಗಲ್ವಾ?” ಅಂಥಾ ಚಂದಾ ಕೇಳಲು ಬಂದ ಚಿಕ್ಕಮಕ್ಕಳಿಗೆ ಪ್ರಶ್ನೆ ಕೇಳೋದು ಮಾತ್ರವಲ್ಲ.
.
.
.
.
.
ವೈಚಾರಿಕತೆ ಅಂದ್ರೆ:

(೧) ಮೊಹಮ್ಮದ್ ಪೈಗಂಬರ್ ನಿಜವಾಗ್ಲೂ ಬುರಾಕ್ ಎನ್ನುವ ‘ಮನುಷ್ಯಮುಖ ಹೊಂದಿದ ರೆಕ್ಕೆಯುಳ್ಳ ಕುದುರೆ’ ಹತ್ತಿ ಜೆರುಸಲೇಂಗೆ ಹೋಗಿದ್ದನಾ? ಹಾಗೂ ಅದೇ ರಾತ್ರಿ ಮತ್ತೊಮ್ಮೆ ಅಲ್ಲಾಹ್ ನ ಬೇಟಿ ಮಾಡಲು ಸ್ವರ್ಗಕ್ಕೆ ಹೋಗಿ ಮರಳಿ ಬಂದನಾ? ಹೌದಾದರೆ, ಕುದುರೆಗೆ ರೆಕ್ಕೆ ಎಲ್ಲಿಂದ ಬಂತು? ಅದಕ್ಕೆ ಮಾನವ ಮುಖಎಲ್ಲಿಂದ ಬಂತು? ಹಾಗೊಂದು ಜೀವಿ ಇರಲು ಸಾಧ್ಯವೇ? ಸ್ವರ್ಗಕ್ಕೆ ಹೇಗೆ ಮನುಷ್ಯ ಹೋಗಲು ಸಾಧ್ಯ? ಜೀವಂತ ಹೇಗೆ ಮರಳಿ ಬರಲು ಸಾಧ್ಯ!? ಎಂದು ಯೋಚಿಸುವುದು ಕೂಡಾ.

(೨) ಸಾಹೀಹ್ ಬುಖಾರಿಯ 4ನೇ ಸಂಪುಟದ, 54ನೇ ಪುಸ್ತಕದ, 490ನೇ ಹಾದಿತ್ ನಿಜವೇ? ಎಂದು ಯೋಚಿಸುವುದು ಹಾಗೂ ಪ್ರಶ್ನಿಸುವುದು ಕೂಡಾ.

(೩) ಕ್ರಿಸ್ತ ನಿಜವಾಗಿಯೂ ಮೂರನೇ ದಿನ ಬದುಕಿ ಬಂದಿದ್ದನೇ? ಆ ರೀತಿ ರಕ್ತಸ್ರಾವವಾದ ವ್ಯಕ್ತಿ ಮೂರುದಿನದವರೆಗೂ ಬದುಕಿರಲು ಸಾಧ್ಯವೇ? ಎಂದು ಯೋಚಿಸುವುದು ಕೂಡಾ.

(೪) ಇಟಲಿಯ ಕಿತ್ತಳೆ ಎಸೆತದ ಆಚರಣೆಗೆ ನಿಜವಾಗಿಯೂ ಅರ್ಥವಿದೆಯೇ? ಅಥವಾ ಅದು ಬರೇ ಕಿತ್ತಳೆಗಳನ್ನು ದುಂದುವೆಚ್ಚ ಮಾಡುವ ಒಂದು ಆಚರಣೆಯೇ? ಎಂದು ಯೋಚಿಸುವುದು ಕೂಡಾ.

(೫) ಸ್ಪೇನಿನ ಬುನ್ಯೋಲ್ ನಲ್ಲಿ, ವಾರ್ಷಿಕವಾಗಿ ನಡೆಯುವ ಟೊಮ್ಯಾಟೀನಾ ಹಬ್ಬಕ್ಕೆ ಮತ್ತು ಪಂಪಲೋನಾದ ಎತ್ತುಗಳ ಓಟದ ಹಬ್ಬಕ್ಕೆ ನಿಜವಾಗಿಯೂ ಅರ್ಥವಿದೆಯೇ? ಅಥವಾ ಅದು ಬರೇ ಟೊಮ್ಯಾಟೋಗಳನ್ನು ದುಂದುವೆಚ್ಚ ಮಾಡುವ ಹಾಗೂ ಎತ್ತುಗಳಂದ ತಿವಿಯಲ್ಪಡುವ ಮನುಷ್ಯರ ಒಂದು ಹಿಂಸಾತ್ಮಕ ಆಚರಣೆಯೇ?ಎಂದು ಯೋಚಿಸುವುದು ಕೂಡಾ.

(೬) ಫಿನ್ಲ್ಯಾಂಡಿನಲ್ಲಿ ಹೆಂಡತಿಯನ್ನು ಎತ್ತಿಕೊಂಡು ಓಡುವ ಸ್ಪರ್ಧೆಗೆ ನಿಜವಾಗಿಯೂ ಅರ್ಥವಿದೆಯೇ? ಅಥವಾ ಅದು ಬರೇ ಅರ್ಥಹೀನ ಆಚರಣೆಯೇ? ಎಂದು ಯೋಚಿಸುವುದು ಕೂಡಾ.

(೭) ಸ್ಪೇನಿನ ‘ಸಂತಾ ಮಾರ್ತಾಳ ಸಾವಿನ ಹಬ್ಬ’ದ (Fiesta de Santa Marta de Ribarteme) ಬಗ್ಗೆ ತಲೆಕೆಡಿಸಿಕೊಂಡು ಅದರ ಅರ್ಥವನ್ನು ಹುಡುಕಿವುದು ಕೂಡಾ.

(೮) ಸಾಂಟಾಕ್ಲಾಸ್ ನಿಜವಾಗಿಯೂ ಇದ್ದಾನೆಯೇ? ಉತ್ತರದ್ರುವದಲ್ಲಿ ಅವನ ಆಟಿಕೆಗಳ ಫ್ಯಾಕ್ಟರಿ ನಿಜವಾಗಿಯೂ ಇದೆಯೇ? ಅವನು ಕ್ರಿಸ್ಮಸ್ಸಿನ ಹಿಂದಿನ ದಿನ ಮನೆಗಳಲ್ಲಿ ಹೊಗೆಚಿಮಣಿಯಿಂದ ಇಳಿದು ಎಲ್ಲರಿಗೂ ಉಡುಗೊರೆಗಳನ್ನು ಕೊಡುತ್ತಾನೆಯೇ? ಅವನಹತ್ತಿರ ಆರು ಹಿಮಸಾರಂಗಗಳ ಒಂದು ಜಾರುಬಂಡಿ ಇದೆಯೇ?ಇದು ನಿಜವಾಗಿಯೂ ಹೇಗೆ ಸಾಧ್ಯ!? ಎಂದು ಯೋಚಿಸುವುದು ಕೂಡಾ.

(೯) ಜಪಾನಿನ ‘ಹದಾಕಾ ಮತ್ಸೂರಿ’ ಎಂಬ ‘ನಗ್ನ ಹಬ್ಬ’ದ ಅರ್ಥದ ಬಗ್ಗೆ ಅವರದೇ ನಾಡಿಗೆ ಹೋಗಿ ಅವರನ್ನ್ನು ಪ್ರಶ್ನಿಸುವುದು ಕೂಡಾ.

(೧೦) ಟ್ಯೂರಿನ್ ನ ಶಾಲು, ಮತ್ತದರ ಹಿಂದಿರುವ ಕಥೆ, ಆ ಶಾಲಿಗಿರುವ ದೈವೀಕ ಮಹತ್ವದ ಘಟನೆಗಳು ನಿಜವಾಗಿಯೂ ಘಟಿಸಿದವು ಹೌದೇ? ಎಂದು ಯೋಚಿಸುವುದು ಕೂಡಾ.

ಹಬ್ಬಗಳು ಅಂದ್ರೆ, ಎಲ್ಲಾ ವೈಜ್ಞಾನಿಕತೆಯನ್ನೂ ಬದಿಗಿಟ್ಟು ವರ್ಷಕ್ಕೊಂದೆರಡು ದಿನ ಮನೆಯವರೆಲ್ಲಾ ಹಾಗೂ ಊರವರೆಲ್ಲಾ ಸೇರಿ ಆಚರಿಸಿ, ಸಂತೋಷಪಡುವುದು. ಜೊತೆಗೆ ಸೇರಿ ನಮ್ಮ ನಮ್ಮ ಸಂತರನ್ನು, ಪ್ರವಾದಿಗಳನ್ನು ಹಾಗೂ ದೇವರನ್ನು ನೆನೆಸಿಕೊಂಡು ಹಾಡುವುದು, ನರ್ತಿಸುವುದು ಹಾಗೂ ಒಟ್ಟಿಗೆ ಅಹಾರವನ್ನುಹಂಚಿಕೊಂಡು ತಿನ್ನುವುದು. ಇದು ಎಲ್ಲಾ ದೇಶಕ್ಕೂ, ಧರ್ಮಕ್ಕೂ ಹಾಗೂ ಜನಾಂಗಗಳಿಗೂ ಅನ್ವಯಿಸುವ ವಿಚಾರ.

 

ಮೇಲೆ ಹೇಳಿದ ಉದಾಹರಣೆಗಳು ಯಾವುದೇ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಸಹೋದರರನ್ನು ಅಥವಾ ಅವರ ನಂಬಿಕೆಗಳನ್ನು ಗೇಲಿ ಮಾಡಲು ಹೇಳಿದ್ದಲ್ಲ. ತಲೆಯಿರದ, ಅಥವಾ ತಲೆಯಿದ್ದರೂ ಅದರ ಹೊರಗೆ ಮತ್ತು ಒಳಗೆ ಏನೂ ತುಂಬಿರದ ಕೆಲವು ‘ವೈಚಾರಿಕ ಪತ್ರಕತ್ತೆ’ರಿಗೆ ಪಾಠ ಹೇಳಲು ಉಪಯೋಗಿಸಿದ್ದಷ್ಟೇ. ಎಲ್ಲಾಧರ್ಮಗಳಲ್ಲೂ ಕೆಲವು ನಂಬಲಸಾಧ್ಯವಾದ ಕಥೆಗಳಿವೆ ಎಂಬುದು ಕನಿಷ್ಟ ಜ್ಞಾನವಿರುವ ಎಲ್ಲರಿಗೂ ತಿಳಿದ ವಿಷಯ. ಆದರೆ ನಮಗಿರುವ ನಿಯಮಿತ ಜ್ಞಾನದ ಪರಿಧಿಯಲ್ಲಿ ಅವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ನಮ್ಮ ಪರಿಧಿಗೆ ಆ ಕಥೆಗಳು ಸರಿಹೊಂದುತ್ತಿಲ್ಲವೆಂದ ಕಾರಣಕ್ಕೆ ಅವನ್ನೆಲ್ಲಾ ಗೇಲಿ ಮಾಡಿ ಬದಿಗೊತ್ತುವಅವಶ್ಯಕತೆಯಿಲ್ಲ, ಅಲ್ಲವೇ? ಪ್ರವಾದಿಯವರು ಇಸ್ರಾ ಮತ್ತು ಮಿರಾಜಿನ ಪ್ರಯಾಣ ಕೈಗೊಡಿದ್ದರು ಎಂಬುದಕ್ಕೆ ಹಾಗೂ ಸಾಂಟಾಕ್ಲಾಸ್ ಬದುಕಿದ್ದಾನೋ ಇಲ್ಲವೋ ಎಂಬುದಕ್ಕೆ ನಮಗೆ ವೈಜ್ಞಾನಿಕ ಪುರಾವೆ ಬೇಕಿಲ್ಲ. ಅದು ನಿಜವೇ ಆಗಲಿ ಸುಳ್ಳೇ ಆಗಲಿ ಆ ದಿನದಂದು ನಾವು ಮನೆಯವರು ಹಾಗೂ ನಮ್ಮ ಊರಿನವರೆಲ್ಲಾ ಒಟ್ಟಿಗೆಸೇರಿ ಕಾಲ ಕಳೆಯುತ್ತೇವೆ. ಆ ದಿನಕ್ಕಾಗಿ ಸಂಭ್ರಮಿಸುತ್ತೇವೆ. ನಮ್ಮ ಪೂರ್ವಜರನ್ನು ನೆನೆಸಿಕೊಂಡು ಅವರಿಗಾಗಿ ಪ್ರಾರ್ಥಿಸುತ್ತೇವೆ.

 

ಇವರಿಗೆ ಗಣೇಶ ಕೂರಿಸೋಕೆ ಇಪ್ಪತ್ತು ರೂಪಾಯಿ ಕೊಡೋಕೆ ಸಾಧ್ಯವಿಲ್ಲ ಅಂದ್ರೆ ಬಾಯ್ಬಿಟ್ಟು ಹೇಳ್ಲಿ. ‘ಅಯ್ಯೋ ಪಾಪ! ಪತ್ರಿಕೆ ಹೆಚ್ಚಾಗಿ ಮಾರಾಟವಾಗ್ತಾ ಇಲ್ಲವಾದ್ದರಿಂದ ಕೈಯಲ್ಲಿ ದುಡ್ಡಿಲ್ಲವೇನೋ’ ಅಂತಾ ಹುಡುಗ್ರು ಮುಂದೆ ಹೋಗ್ತಾ ಇದ್ದರು. ಅದು ಬಿಟ್ಟು ಇವರ ಬೌದ್ಧಿಕ ದಿವಾಳಿತನ ತೋರಿಸೋಕೆ ಹೋಗಿನಗೆಪಾಟಲಿಗೀಡಾಗುವ ಆಸೆಯೇಕೆ!? ಸಧ್ಯ ಹುಡುಗರು ಸ್ವಲ್ಪ ಸಭ್ಯರು ಅನ್ಸುತ್ತೆ. ಅದಕ್ಕೇ ‘ಹೋಗ್ಲಿ ಬಿಡೋ….ಏನೇನೋ ಬಡಬಡಾಯಿಸ್ತಾ ಇದ್ದಾರೆ’ ಅಂತಾ ಸುಮ್ಮನೇ ವಾಪಾಸು ಬಂದಿದ್ದಾರೆ. ಇಲ್ಲಾಂದರೆ, ಈಗಿನ ಮಕ್ಕಳು ಎಷ್ಟು ಚೂಟಿ ಇರ್ತಾರೆ ಅಂತಾ ಗೊತ್ತಲ್ವಾ!? ಆ ಮಕ್ಕಳಲ್ಲಿ ಯಾರಾದರೂ ಒಬ್ಬ ತಿರುಗಿಬಿದ್ದು ನಿಮ್ಮಹೆಸರೂ ದೇವರ ಹೆಸರೇ ಇದ್ಯಲ್ಲಾ ಆಂಟಿ! ಅದು ಹೆಂಗೆ? ನಿಮಗ್ಯಾರೂ ಸಣ್ಣವರಿದ್ದಾಗ ಗಣೇಶನ ಕಥೆ ಹೇಳ್ಲಿಲ್ವಾ? ನೀವು ಹುಟ್ಟಿದ್ದು ಯಾರಿಗೆ? ಗಣೇಶನ ಆನೆ ತಲೆ ಎಲ್ಲಿಂದ ಬಂತು ಎನ್ನುವುದು ಬದಿಗಿರಲಿ, ನಿಮ್ಮ ಪತ್ರಿಕೆ ಎಲ್ಲಿಂದ ಬಂತು? ಅಂತಾ ಕೇಳಿದ್ದರೆ? ತಮ್ಮ ಪ್ರಶ್ನೆ ತಮಗೇ ಉರುಳಾಗುವುದರೆ ಜೊತೆಗೆ, ಸುಖಾಸುಮ್ಮನೆಆಂಟಿ ಅಂತಾ ಬೇರೆ ಕರೆಸ್ಕೊಂಡು ಕೆಂಪಾಗುವ ಸನ್ನಿವೇಶ ಸೃಷ್ಟಿಯಾಗ್ತಾ ಇತ್ತು. ಸಧ್ಯಕ್ಕಂತೂ ಆ ಮಕ್ಕಳು ಆ ಮನೆಯಕಡೆ ತಲೆ ಹಾಕುವಂತ ಪ್ರಮಾದ ಮಾಡುವುದಿಲ್ಲ ಎಂಬ ಸಮಾಧಾನ ನನಗೂ ಹಾಗೂ ಆ ಬುದ್ಧಿಜೀವಿಗೂ ಸಹ. ಮುಂದಿನ ವರ್ಷ ಮಕ್ಕಳು ‘ಲೇಯ್…ಆ ಮನೆಗೆ ಹೋಗೋದು ಬೇಡ. ನೆನಪಿದ್ಯಾ ಹೋದ ಸಲಏನೇನೋ ಮಾತಾಡಿ ನಮ್ಮನ್ನು ಓಡಿಸಿದ್ರು. ಅರಳು ಮರಳು ಆಂಟಿ ಅವ್ರು’ ಅಂತಾ ಅಂದ್ಕೊಂಡು ಮುಂದೆ ಹೋಗ್ತಾರೆ.

 

ಎಲ್ಲೋ ಒಮ್ಮೆ ಓದಿದ ಜೋಕು….ಎಲ್ಲರ ಮನೆಯ ಮುಂದೆ ‘ನಾಯಿ ಇದೆ ಎಚ್ಚರಿಕೆ’ ಎಂಬ ಬೋರ್ಡಿದ್ದರೆ, ಒಬ್ಬರ ಮನೆಯ  ಮುಂದಿನ ಬೋರ್ಡು ಹೀಗಿತ್ತು ‘ನಾಯಿ ಏನೋ ಪರ್ವಾಗಿಲ್ಲ….ಅದರ ಯಜಮಾನನ ಬಗ್ಗೆ ಎಚ್ಚರವಿರಲಿ’. ಈ ಲೇಖನಕ್ಕೆ ಕಾರಣವಾದ ಫೇಸ್ಬುಕ್ಕಿನ ಪೋಸ್ಟು ಹಾಕಿದವರು ತಮ್ಮ ಮನೆಯ ಮುಂದೆಬೋರ್ಡು ಹಾಕಿರಲಿಲ್ಲವೋ ಅಥವಾ ಚಂದಾ ಎತ್ತಲು ಹೋದ ಮುಗ್ಧ ಮಕ್ಕಳು ಬೇರ್ಡು ಓದಲಿಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಮನೆಯ ಯಜಮಾನರಿಗೆ ತಮ್ಮ ಬುದ್ಧಿಮತ್ತೆಯ ಬಗ್ಗೆ ಕೊಚ್ಚಿಕೊಳ್ಳಲು ಒಂದಷ್ಟು ಅವಕಾಶ ಸಿಕ್ಕಿತು. ಅದೂ ಕೂಡ ಹತ್ತರಿಂದ ಹದಿನೈದು ವರ್ಷದ ಚಿಕ್ಕ ಮಕ್ಕಳ ಮುಂದೆ.

 

ಇನ್ನೊಂದು ಅರ್ಥವಾಗದ ವಿಷಯವೆಂದರೆ, ಈ ಬುದ್ಧಿಜೀವಿಗೆ ಕಂಡಕಂಡಲ್ಲೆಲ್ಲಾ ‘ಹುಟ್ಟಿದ್ದು ಯಾರಿಗೆ?’ ಎಂದು ಸ್ಪಷ್ಟೀಕರಣ ಕೇಳುವ ಅಭ್ಯಾಸ. ಕೆಲ ಸಮಯದ ಹಿಂದೆ ಯೂಟ್ಯೂಬಿನಲ್ಲಿ ಇವರ ಭಾಷಣದ ವೀಡಿಯೋ ತುಣುಕೊಂದನ್ನು ನೋಡಿದೆ ಅದರಲ್ಲಿ ಹಿಂದು ಧರ್ಮದ ಅಪ್ಪ ಅಮ್ಮ ಯಾರು? ಅದು ಯಾರಿಗೆ ಹುಟ್ಟಿದ್ದು? ಅಂತಾತಲೆಕೆಡಿಸಿಕೊಂಡಿದ್ದರು. ಮೊನ್ನೆ ಗಣೇಶ ಯಾರಿಗೆ ಹುಟ್ಟಿದ್ದು? ಅಂತಾ ಹುಡುಗರ ತಲೆತಿನ್ನುತ್ತಿದ್ದರಂತೆ. ಪಾಪ ಚಿಕ್ಕವಯಸ್ಸಿನಲ್ಲಿ ಮನೆಯಲ್ಲಿ ಸಂಬಂಧಿಕರ್ಯಾರಾದರೂ ಪೌರಾಣಿಕ ಕಥೆಗಳನ್ನು ಹೇಳಿದ್ದರೆ ಆಕೆಯ ಹೆಸರೂ ಗಣೇಶನ ಅಮ್ಮನ ಹೆಸರೂ ಒಂದೇ ಎಂದು ತಿಳಿಯುತ್ತಿತ್ತು. ಆದರೆ ಮಾನವ ಸಂಬಂಧಗಳು ಮತ್ತದರಮಹತ್ವ ತಿಳಿಯದ ಜನರಿಂದ ಇಷ್ಟೆಲ್ಲಾ ಬುದ್ಧಿವಂತಿಕೆಯನ್ನು ನಿರೀಕ್ಷಿಸುವುದು ಬಹುಷಃ ನನ್ನ ಬುದ್ಧಿವಂತಿಕೆಯ ಅಧಃಪತನವನ್ನು ತೋರಿಸುತ್ತದೆ.

 

ಈ ಅಕ್ಕಯ್ಯ ಹೇಳ್ತಾರೆ:

“ಅವರೆಲ್ಲರ ಹೆಸರುಗಳನ್ನು ಮತ್ತು ಮನೆ ದೇವರುಗಳ ಬಗ್ಗೆ ಕೇಳಿದೆ. ಅದರಿಂದ ಗೊತ್ತಾಗಿದ್ದೇನೆಂದರೆ ಅವರಲ್ಲಿ ಒಬ್ಬ ಲಿಂಗಾಯತ, ಇನ್ನಿಬ್ಬರು ಒಕ್ಕಲಿಗರು ಮತ್ತೊಬ್ಬ ಹಿಂದುಳಿದ/ದಲಿತ ವರ್ಗದವನು.”

 

ನಿಜವಾಗಿಯೂ ಇವರು ವೈಚಾರಿಕರೇ ಆಗಿದ್ದರೆ, ಇವರಾಡಿದ ಮಾತಿನಲ್ಲೇ ಇವರ ‘ನಿಮ್ಮ ಗಣೇಶ ಹಬ್ಬಕ್ಕೆ ನಾನ್ಯಾಕೆ ಚಂದಾ ಕೊಡಬೇಕು!?’ ಎನ್ನುವ ಪ್ರಶ್ನೆಗೆ ಉತ್ತರವಿತ್ತು. ಆ ಮಕ್ಕಳು ತಾವು ಯಾವ ಜಾತಿ, ವರ್ಗ ಎಂದೆನ್ನುವುದನ್ನೂ ಗಮನಿಸದೆ ಹಬ್ಬವೊಂದರಲ್ಲಿ, ಅದರ ಸಂಭ್ರಮದಲ್ಲಿ ತೊಡಗಿಕೊಂಡಿದ್ದರು. ಇದೇ ಅಲ್ಲವೇ ಈ ಹಬ್ಬಗಳ ಮಹತ್ವ ಹಾಗೂ ಸುಂದರತೆ? ಯಾವುದೇ ಮಿತಿಗಳಿಲ್ಲದೆ, ಮುಗ್ದತೆಯಿಂದ ಒಂದಾಗಿ, ಇಡೀ ಸಮಾಜವೇ ಹತ್ತಿರವಾಗುವ ಕಲ್ಪನೆಗಳಲ್ಲವೇ ಈ ನಮ್ಮ ಊರ ಹಬ್ಬಗಳು? ನಮ್ಮೂರ ಹತ್ತಿರದ ನರಸಿಂಹರಾಜಪುರದಲ್ಲಿ ಉರುಸ್ ನಡೆಯುವಾಗ ‘ಅಲ್ಲಾ ಎಲ್ಲಿದ್ದಾನೆ? ಕಾಬಾ ಎಲ್ಲಿದೆ?’ ಅಂತಾ ಕೇಳಿ ನಾವು ಸಕ್ಕರೆ ದಾನ ಮಾಡಿರಲಿಲ್ಲ. ಕೊಪ್ಪದಲ್ಲಿ ವರ್ಷಕ್ಕೊಮ್ಮೆ ಕ್ರಿಸ್ತಭಾಂಧವರು ಮೇಣದಬತ್ತಿ ಹಿಡಿದುಕೊಂಡು ರಾತ್ರಿ ಎಂಟಕ್ಕೆ ಮೆರವಣಿಗೆ ಬಂದಾಗ, ಮಾತಿಲ್ಲದೇ ನಾವೆಲ್ಲ ರಸ್ತೆ ಬದಿ ಸೇರಿ ಅವರ ಆಚರಣೆಯಲ್ಲಿ ಒಂದಾಗುತ್ತಿದ್ದೆವು. ಕಾನ್ವೆಂಟಿನಲ್ಲಿ ಬಾಯಿಪಾಠವಾದ ಅವರ ಪ್ರಾರ್ಥನೆಗಳನ್ನು ಹಾಡುತ್ತಿದ್ದೆವು. ನಮಗೆ ಆ ಮೆರವಣಿಗೆಗೂ, ವೀರಭದ್ರನ ಉತ್ಸವಕ್ಕೂ ಏನೂ ವ್ಯತ್ಯಾಸವಿರಲಿಲ್ಲ. ಎಲ್ಲದಕ್ಕೂ ಖುಶಿಯಿಂದ ರಸ್ತೆಗಿಳಿಯುತ್ತಿದ್ದೆವು. ಈ ಮಕ್ಕಳೂ ಸಹಾ ಹಾಗೆಯೇ ಇವರ ಮನೆಗೆ ಬಂದಿದ್ದಾರೆ. ಅಂತಾ ಮಕ್ಕಳನ್ನು ಮನೆಯೊಳಗೆ ಕರೆದು, ಹತ್ತಿರಕೂರಿಸಿಕೊಂಡು “ಹೀಗೆ, ರಸ್ತೆ ರಸ್ತೆ ಸುತ್ತಾಡುತ್ತಾ ಹಣ ಕಲೆಕ್ಟ್ ಮಾಡಿದರೆ ನಿನಗೆ ವಿದ್ಯೆ ಬರಲ್ಲ ಹುಡುಗ. ನೆಟ್ಟನೆ ಪುಸ್ತಕ ಓದು. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನೋಡು. ಆಗ ನಿನಗೆ ವಿದ್ಯೆ ಬರುತ್ತೆ” ಎಂದು ಹೇಳಿ ಅವರ ಮನಸ್ಸಿನಲ್ಲಿ ಹುಸಿ ವೈಚಾರಿಕತೆಯ ಸುಳ್ಳಿನ ವಿಷಬೀಜವನ್ನು ಬಿತ್ತಿ ಕಳಿಸಿದ್ದಾಳಲ್ಲ ಮಹಾರಾಯ್ತಿ!!! ಹೆಸರು ಕೇಳಿ ಜಾತಿ ನಿರ್ಧರಿಸಿಬಿಟ್ಟಿದ್ದಾಳಲ್ಲ ಈ ತಾಯವ್ವ!!!!…..ಇವರೇನಾ ಸಮಾಜದಲ್ಲಿ ಸಮಾನತೆಯ ಭಾಷಣ ಬಿಗಿಯುತ್ತಿರುವ ಮಹಾಜನಗಳು!? ಉದ್ಧಾರ ಇವರ ಹಿಂಬಾಲಕರು ಇವರ ಮಕಕ್ಕಿಷ್ಟು…..

 

ಮನುಷ್ಯ ಜಗತ್ತನ್ನು ಸುತ್ತಬೇಕು. ಮಾನವನ ಹಾಗೂ ನಾಗರೀಕತೆಗಳ ವಿಕಾಸವನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು. ಧರ್ಮಗಳನ್ನು ಅರಿಯಬೇಕು. ಧರ್ಮದ ಹಿಂದಿರುವ ಸಾರವನ್ನು ಹೀರಬೇಕು. ಅದರ ಕಥೆಗಳಿಂದ ರಂಜಿತರಾಗಬೇಕು. ಆಗ ಮಾತ್ರ ಜೀವನವನ್ನು, ನಾವು ಬದುಕುತ್ತಿರುವ ರೀತಿಯನ್ನು, ಅದರ ಹಿಂದಿರುವಕಾರಣಗಳನ್ನು ಮತ್ತಷ್ಟು ಹತ್ತಿರದಿಂದ ಅರ್ಥೈಸಿಕೊಳ್ಳಲು ಸಾಧ್ಯ. ವೈಜ್ಞಾನಿಕತೆಯೆಂದರೆ ಬರೀ ಸಲ್ಫ್ಯೂರಿಕ್ ಆಸಿಡ್ಡಿನ ಫಾರ್ಮುಲಾ ತಿಳಿಯುವುದಲ್ಲ. ವೈಚಾರಿಕತೆಯೆಂದರೆ ಬರೀ ಧರ್ಮಗ್ರಂಥಗಳನ್ನು ಕಾಲಕಸಮಾಡಿ, ಹಳೆಯದೆಲ್ಲಾ ಜೊಳ್ಳು ಎಂದು ಗಾಳಿಗೆ ತೂರುವುದಲ್ಲಾ. ಗಣೇಶನೇ ಇಲ್ಲದ ಮೇಲೆ ಗಣೇಶನ ಹಬ್ಬವೇಕೆ ಎಂದುಮೂಗುಮುರಿಯುವುದಲ್ಲ. ಫಿಸಿಕ್ಸ್, ಕೆಮಿಸ್ಟ್ರಿಗಿಂತಾ ಉತ್ತಮ ವಿಜ್ಞಾನಗಳು ಮಾನವಶಾಸ್ತ್ರ (anthropology), ಸಮಾಜಶಾಸ್ತ್ರ (sociology), ಮನಶ್ಯಾಸ್ತ್ರ (psychology) ಮತ್ತು ಅರ್ಥಶಾಸ್ತ್ರಗಳು (economics). ಅವನ್ನು ಓದಿ, ಮನುಷ್ಯ ಯಾಕೆ ಹೀಗಿದ್ದಾನೆ!? ಎಂದು ತಮ್ಮನ್ನೇ ಪ್ರಶ್ನಿಸಿಕೊಂಡು ತಮ್ಮ ಜ್ಞಾನದಪರಿಧಿಯನ್ನು ಹೆಚ್ಚಿಸಿಕೊಳ್ಳಬೇಕು. “ಮನುಷ್ಯ ಇದ್ದರೆ ತಾನೇ ಜಗತ್ತು ಮತ್ತದರ ಅಸ್ತಿತ್ವದ ಬಗ್ಗೆ ಚರ್ಚೆನಡೆಯಲು ಸಾಧ್ಯ? ಆದ್ದರಿಂದ ಜಗತ್ತಿನ ಅಸ್ತಿತ್ವದ ಬಗ್ಗೆ ತಿಳಿಯುವ ಮುನ್ನ ಮನುಷ್ಯನ ಅಸ್ತಿತ್ವ ತಿಳಿಯುವುದು ಮುಖ್ಯ” ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಜಗತ್ತಿನ ಎಲ್ಲಾ ಮನುಷ್ಯರ ಹಾಗೂ ನಾಗರೀಕತೆಗಳು ನಡೆದುಬಂದ ಹಾದಿ ಹಾಗೂ ಅವುಗಳ ನಡವಳಿಕೆಗಳನ್ನು ಈ ನಾಲ್ಕು ವಿಜ್ಞಾನಗಳು ಹೇಳಿದಷ್ಟು ಸಮರ್ಪಕವಾಗಿ ಇನ್ಯಾವುದೂ ಹೇಳುವುದಿಲ್ಲ. ಸಾಧ್ಯವಾದರೆ ಓದಬೇಕು. ವೈಜ್ಞಾನಿಕತೆಯ ವೈಚಾರಿಕತೆಯ ಡಂಗುರ ಬಾರಿಸುವ ಮುನ್ನ ಅದೇನೆಂದು ಅರ್ಥೈಸಿಕೊಳ್ಳಬೇಕು. ಇಲ್ಲವಾದಲ್ಲಿ ಕೈಯಲ್ಲಿ ಹಿಡಿದಿರುವ ಕೆಂಪು ಬಾವುಟವನ್ನುಉಂಡೆಸುತ್ತಿ ಬಾಯಿಗಿಟ್ಟುಕೊಳ್ಳಬೇಕು.

Oh India…..I love you

Wait a minute……whom are we trying to blame here!!? Why are we holding police responsibility for all the rapes that are happenings around the country (or even the around world)!? The rape statistics in India are horrifying and they say that 97% of the rape cases are committed inside the house (by known people) and only 3% of cases are reported as committed in the area that can be referred as “in public vicinity”. Even out of the 97% cases of domestic rape cases…..the assaults are done by people who are called as “Father, Brother, Father-in-law, Neighbor, Friend, Ex-boyfriend, Ex-husband, Cousin, Brother-in-law”. These are the people who are supposed to protect a woman in the real sense, in all rights, at all the times. When the people who are supposed to protect are committing these crimes why are blaming the police!? I am not saying police has done their jobs at the best. What I am saying is, neither the root the problem nor the solution are Police. It;s us……the people, the community, the neighborhood, and the people whom we choose to bring in the change in the society we live in  (we call them as our leaders……but in reality they are bloody politicians)

I believe the people to be blamed are (possibly in an order):

  1. The government (both state and central) who have not tried to bring the change
    1.  into the judiciary mechanism by changing the way a rapist is punished (so that the thought of rape is negatively stoked)
    2. nor by changing the way a rape victim is treated by the police or the court or the society (so that victim’s are encouraged to report the incidents and the wrongdoer is punished)
    3. nor by creating fast track courts or maintaining them in a functional manner
    4. nor by instilling confidence in creating awareness campaigns for women about their protection (so that the women are informed and empowered about their rights)

2.       The National Commission for Women (so called the govt body working on women’s rights and protection)

a.       for not spending the grants righteously to create awareness and protect women’s interests by financially assisting the rape cases (with legal fees and aides) to make sure the cases are logically and judicially seen an end

b.      for creating corpus which will subsidize courses for women on self protection (like SM Krishna subsidized IT education in Karnataka with NIIT, Keonics and Aptech). I know it’s a small initiative but can create a stronger and able community in the long run. We can even make self protection courses as mandatory from higher secondary schools.

3.       The men who are committing the crime, for proactively not going through a psycho-therapy for even getting an idea of such a heinous act like rape. Please let’s not be idiots who will say “Ladies these days are dressed in a way that encourages men to rape them”. Because that statement will only encourage me (and I am sure some more sensible men out there) to slap in the face of the person who says so. We have enough examples of the countries where ladies dress more “provocatively” (it’s a nonsense word, but I have to use it here) but still the instances of rape are lower than India. The reasons for such a protection are I am sure simple (like stringent laws, priority to these cases over stupid civil legalities about a piece of land etc,. and harsher punishments). Rape is a psychological act, and hence is a social problem. I am not sure what can be done here to make men realize that they are mentally sick if they are thinking to rape a woman (that too in someone in their own house or neighborhood). If there are more intelligent men out there, please fill me in here.

Then at last……..yes THE POLICE

4.       The police, for not creating an environment where people feel as walking in fearlessly and report a bad incident. This applies not just rape cases but for any bad incident. When I was attacked at 10:30 PM in Bangalore (let’s admit, 10:30 PM in Bangalore is not too late in night where police can say what are doing so late out on the streets), and when I walked into the police station requesting them to come with me so that I can identify them for next actions, they were reluctant to do so or even take my complaint (well…that’s a totally different story let’s not talk here :)). I read in the paper the police in Delhi offered the parents of the poor girl money to keep quiet. It was shocking at so many levels!! (Perhaps, this is the first case in India with “reverse bribery”, where police offered money to a civilian 🙂 🙂 )

I wish god should have created a disease, just like AIDS or Ebola, which can kill a man only when he violates or rapes a woman!! I think at this point in time only such a miracle can stop these rape cases by happening again and again, unless we think about the above 4 points 🙂 🙂

P.S: The above lines are written with a generic intent in mind. I am equally eloquent and critical about the  sexual violations that happen on men/boys. Just clarifying that I am not (pseudo)feminist who barks in the media 🙂