ಮಳೆ 03/02/2014

“ಗೆಳತಿ ನಿನ್ನ ಕಣ್ಣುಗಳಂಬುಧಿಯಲ್ಲಿ
ನಿನ್ನ ಅಧರಗಳ ನೀರಧಿಯಲ್ಲಿ
ಮುಳುಗಿದ್ದೇನೆ
ಬಾಯಾರಿದೆ….ನಿನ್ನ ನಗು ಕಣ್ಣಮುಂದೆ

ನಿನ್ನ ರೆಪ್ಪೆಗಳು ನನ್ನೆವೆಗೆ ಕಥೆಯೊಂದ ಹೇಳಿವೆ
ನಿನ್ನ ಪ್ರೀತಿಯೇ ಅವುಗಳ ಗಮ್ಯವಂತೆ
ನೀ ಮರೆಯದಿರು, ನಾ ಮರೆಯಲಾರೆ
ಈ ಒಲವೆ ಕಡೆಯ ಮೆಟ್ಟಿಲಂತೆ

ಕುದಿರಕ್ತದಲ್ಲಿ ಹಬೆಯಾಡುತ್ತಿರುವ ನನ್ನ ವಿರಹ
ತಿಳಿಮಲ್ಲಿಗೆ ಚೆಲ್ಲಿ ಕೊಲ್ಲುವ ನಿನ್ನ ನಗುವಿನ ನೆನಪು
ಹೊರಳಾಡುವ ನನ್ನ ನಿದ್ದೆ
ಅದರಲ್ಲಿ ಕದ್ದೋಡುವ ನಿನ್ನ ಕನಸು

ನಿನ್ನೆಲ್ಲಾ ಸಿಹಿನೋವು ನಿರ್ಬಂಧಗಳಿಗೆ
ಅವುಗಳೂರಿಗೆ ಮರಳಲು ಸೀಟು ಕಾಯ್ದಿರಿಸಿದ್ದೇನೆ
.
.
ನಾನು ಬಂದಿದ್ದೇನೆ ಗೆಳತಿ
ನಿನ್ನ ಕಂಗಳ ಚೆಲ್ಲಾಟದಲ್ಲಿ ಮೀಯಲು”

‘ಶಫಾಕತ್ ಅಮಾನತ್ ಅಲಿ ಖಾನ್’ನ ಫ್ಯೂಝೋನ್ ಗುಂಪು ಹಾಡಿರುವ ‘ಆಂಖೋಂಕೆ ಸಾಗರ್’ ಹಾಡಿನ ಸಡಿಲ ಭಾವಾನುವಾದ.

Advertisements