ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೨

ಜಗಳ ಅಥವಾ ವಾದ ಮಾಡಿ ಎದುರಾಳಿಯನ್ನು ಮಣಿಸುವುದು ಬೇರೆ. ಎರಡೇ ಮಾತಿನಲ್ಲಿ ಎದುರಾಳಿ ಮತ್ತೆ ಉಸಿರೆತ್ತದಂತೆ ಮಾಡುವುದು ಬೇರೆ. ಮೊದಲನೆಯದು ಪ್ರತಿಭೆ, ಎರಡನೆಯದು ಕಲೆ. ಅಂತಹ ಕಲಾಕಾರರಲ್ಲಿ ಚರ್ಚಿಲ್ ಬಹುಷಃ ಮುಖ್ಯ ಹೆಸರು. ಆದರೆ ಇಂತಹ ಕಲಾಕಾರರಿಗೂ ಮಣ್ಣುಮುಕ್ಕಿಸಬಲ್ಲ ಅತಿಕಲಾಕಾರರಿಗೇನೂ ಜಗತ್ತಿನಲ್ಲಿ ಕಮ್ಮಿಯಿಲ್ಲ. ನಾನು ಹಿಂದೊಮ್ಮೆ ಹೇಳಿದ್ದೆ, ಇಲ್ಲಿ ಚರ್ಚಿಲ್ ಕುರಿತ ವಿಷಯಗಳು ಪದೇ ಪದೇ ಪ್ರಸ್ತಾಪವಾಗಬಹುದು ಅಂತಾ. ಇವತ್ತಿನ ವಿಷಯ ಮತ್ತೆ ಅವರದ್ದೇ. ತನ್ನ ಮಿತ್ರರು ಹಾಗೂ ಶತ್ರುಗಳಿಂದ ಸಮಾನವಾಗಿ ದ್ವೇಷಿಸ್ಪಡುತ್ತಿದ್ದ ಚರ್ಚಿಲ್ ನಮಗಾಗಿ ಬಹಳಷ್ಟು ಕಥೆಗಳನ್ನು ಬಿಟ್ಟು ಹೋಗಿದ್ದಾರೆ 🙂

ಒಮ್ಮೆ ಕಾರ್ಯಕ್ರಮವೊಂದರಲ್ಲಿ ಯಥಾಪ್ರಕಾರ ಕುಡಿದು ಹೊರಟಿದ್ದ ಚರ್ಚಿಲ್ಲರಿಗೆ, ಮೆಟ್ಟಿಲ ಬಳಿ ಅವರ ‘ಪರಮಸ್ನೇಹಿತ’ ಜಾರ್ಜ್ ಬರ್ನಾರ್ಡ್ ಷಾ ಸಿಕ್ಕಿಬಿಟ್ಟರು. ಬರ್ನಾರ್ಡ್ ಮೆಟ್ಟಿಲೇರಿ ಮೇಲಿನ ಮಹಡಿಗೆ ಹೊರಟಿದ್ದರೆ, ಚರ್ಚಿಲ್ ಇಳಿದು ಕೆಳಗೆ ಹೊರಟವರು. ಆ ಹಳೆಯ ಕಟ್ಟಡದ ಹಳೆಯ ಮಾದರಿಯ ಮೆಟ್ಟಿಲುಗಳಲ್ಲಿ ಒಂದೇ ಬಾರಿಗೆ ಇಬ್ಬರು ಆರಾಮಾಗಿ ಒಡಾಡುವಷ್ಟು ಜಾಗವಿರಲಿಲ್ಲ. ಒಬ್ಬರನ್ನೊಬ್ಬರು ತಾಕಿಕೊಂಡೇ ಓಡಾಡಬೇಕಿತ್ತು. ನಮ್ಮ ಚರ್ಚಿಲ್ ಸಾಹೇಬರು ಮೊದಲೇ ದಾರ್ಷ್ಟ್ಯದ ಪ್ರತಿರೂಪ. ಬದಿಗೆ ಸರಿದು ದಾರಿ ಬಿಡಲು ಸಿದ್ಧವಿರಲಿಲ್ಲ. ಅದರ ಮೇಲೆ ‘ಪರಮಾತ್ಮನ’ ಕೃಪೆ ಬೇರೆ ಆಗಿತ್ತು. ಅವರ ಬಾಯಿಯ ಮೂಲಕ ಪರಮಾತ್ಮ ನುಡಿದೇ ಬಿಟ್ಟ. ಸಧ್ಯ ಬರ್ನಾರ್ಡ್ ಷಾ ಅವರ ಮುಖದ ಮೇಲಲ್ಲ, ತಮ್ಮ ಹಿಂದಿದ್ದ ಸಂಸದ ಸ್ನೇಹಿತ ಡೇವ್ ಮೂಲಕ. ‘ಡೇವ್, ನಾನು ನಾಯಿಗಳಿಗೆ ದಾರಿಬಿಡುವುದಿಲ್ಲ ಎಂದು ಇಲ್ಲಿ ಕೆಲವರಿಗೆ ಗೊತ್ತಿಲ್ಲವೆನ್ನಿಸುತ್ತದೆ’ ಎಂದರು.

ಬೇರೆ ಯಾರಾದರೂ ಆಗಿದ್ದರೆ ಕಪಾಳಕ್ಕೆರಡು ಬಿಡುತ್ತಿದ್ದರೇನೋ. ಆದರೆ ಇಲ್ಲಿದ್ದದ್ದು ಮಾತಿನ ಕಲಾಕಾರರು. ಅದರಲ್ಲೂ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ. ಚರ್ಚಿಲ್ಲರ ಮುಖದ ಕಳೆ ನೋಡಿದವರೇ, ಹೆಚ್ಚೇನೂ ಕೋಪಿಸಿಕೊಳ್ಳದೇ, ಮೆಟ್ಟಿಲಲ್ಲೇ ಬದಿಗೆ ಸರಿದು ನಿಲ್ಲುತ್ತಾ ‘ಪರವಾಗಿಲ್ಲ ಡೇವ್, ನಾನು ನಾಯಿಗಳಿಗ ಸದಾ ಜಾಗ ಬಿಟ್ಟುಕೊಡುತ್ತೇನೆ’ ಎಂದರು.

ರತ್ನಗಂಬಳಿ ಹಾಸಿದ್ದ ಆ ಮೆಟ್ಟಿಲಮೇಲೂ ಸೂಜಿ ಬಿದ್ದರೆ ಕೇಳುವಷ್ಟು ನಿಶ್ಯಬ್ದ ಅಲ್ಲಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s