ರಸ ಝೆನು – 3

ಒಬ್ಬ ರೈತ ಇಡೀ ಸಂಸ್ಥಾನದಲ್ಲಿ ಅತ್ಯುತ್ತಮ ಜೋಳಬೆಳೆಯುತ್ತಿದ್ದ. ಪ್ರತೀವರ್ಷವೂ ಅವನಿಗೇ ಅತ್ಯುತ್ತಮ ಜೋಳಬೆಳೆಗಾರನೆಂಬ ಪ್ರಶಸ್ತಿ ಸಿಗುತ್ತಿತ್ತು. ಅವನಿಗೊಂದು ಅಭ್ಯಾಸವಿತ್ತು. ಅದೇನೆಂದರೆ, ಪ್ರಶಸ್ತಿ ಗೆದ್ದ ದಿನ ಸಂಜೆ ಆತ ತನ್ನ ನೆರೆಯ ರೈತರಿಗೆಲ್ಲ ತನ್ನ ಜೋಳದ ಬೀಜವನ್ನು ಹಂಚುತ್ತಿದ್ದ. ಊರಿಗೆ ಹೊಸದಾಗಿ ಬಂದವನೊಬ್ಬ ಇದನ್ನು ಗಮನಿಸಿ ಕೇಳಿದ ‘ಅಲ್ಲಯ್ಯಾ, ಈ ರೀತಿ ನಿನ್ನ ಉತ್ತಮ ಜೋಳದ ಬೀಜಗಳನ್ನು ಉಳಿದವರಿಗೆ ಹಂಚಿದರೆ ಮುಂದಿನ ವರ್ಷ ಪ್ರಶಸ್ತಿ ಅವರಿಗೆ ಹೊರಟು ಹೋಗುತ್ತದಲ್ಲಯ್ಯಾ!’.

ಅದಕ್ಕೆ ರೈತನೆಂದ ‘ಇಲ್ಲ ಸ್ವಾಮಿ. ನಾನು ಬಹಳ ಸ್ವಾರ್ಥಿ. ಇದು ನಾನು ನನಗೋಸ್ಕರವಾಗಿಯೇ ಮಾಡುತ್ತಿರುವುದು’.

ಮುಂದಿನ ಪ್ರಶ್ನೆ ಸಹಜವಾಗಿಯೇ ಬಂತು ‘ಅದು ಹೇಗೆ ಸ್ವಾರ್ಥ! ನೀನು ಗೆಲ್ಲುವ ನಿನ್ನ ಅವಕಾಶವನ್ನು ಬಿಟ್ಟಿಕೊಟ್ಟಂತಾಗಲಿಲ್ಲವೇ!?’
.
.
ರೈತನೆಂದ ‘ಇಲ್ಲ ಇಲ್ಲ…ನೋಡಿ….ಬೇಸಾಯದಲ್ಲಿ ಪರಾಗಸ್ಪರ್ಷ ಅತೀ ಮುಖ್ಯ ಕಾರ್ಯ. ನನ್ನ ನೆರೆಯ ರೈತರು ಕೀಳುಮಟ್ಟದ ಜೋಳ ಬೆಳೆದರೆ, ನನ್ನ ಜೋಳದ ಮಟ್ಟವೂ ಇಳಿಕೆಯಾಗುತ್ತದಲ್ಲವೇ. ಅದಕ್ಕೇ ಅವರ ಜೋಳದ ಗುಣಮಟ್ಟ ಮೇಲ್ಮಟ್ಟದಲ್ಲಿರುವಂತೆ ನೋಡಿಕೊಳ್ಳುವುದು ಕೂಡಾ ನನ್ನದೇ ಜವಾಬ್ದಾರಿ.’

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s