ರಸ ಝೆನು – 2

ರೈತನೊಬ್ಬನಿಗೆ ಒಂದು ದಿನ ತನ್ನ ಕೊಡಲಿ ಕಾಣೆಯಾಗಿರುವುದು ಗಮನಕ್ಕೆ ಬಂತು. ಇಡೀ ಮನೆ, ಕೊಟ್ಟಿಗೆ, ಕೋಳಿಗೂಡು ಎಲ್ಲಿಹುಡುಕಿದರೂ ಸಿಗಲಿಲ್ಲ. ಕೊನೆಯದಾಗಿ ತಾನು ಅದನ್ನು ಎಲ್ಲಿ ಬಿಟ್ಟಿದ್ದೆ ಎಂದೂ ನೆನಪಾಗಲಿಲ್ಲ. ಯಾಕೋ ಅವನಿಗೆ ಪಕ್ಕದ ಮನೆಯವನ ಮಗನ ಮೇಲೆ ಸಂಶಯ ಬಂತು. ಮೊದಲಿನಿಂದಲೂ ಆ ಹುಡುಗನ ಮೇಲೆ ಸ್ವಲ್ಪ ಅನುಮಾನವಿತ್ತು. “ಅವನೇ ಕದ್ದಿರ್ಬೇಕು. ನೆನಪಿದ್ಯಾ, ಅವತ್ತೇನೋ ಮಾಡ್ತಾ ಇದ್ದ ಅಲ್ಲಿ ಕೋಳಿಗೂಡಿನ ಪಕ್ಕ. ಅವತ್ತು ಅನ್ನಿಸಿತ್ತು ಮೊಟ್ಟಿಗಳು ಕಡಿಮೆ ಇವೆ ಅಂತಾ. ಮೂರ್ನಾಲ್ಕು ಸಲ ಆ ಕಟ್ಟಿಗೆ ಜೋಡಿಸುವಲ್ಲೂ ಸುಳಿದಾಡ್ತಾ ಇದ್ದ. ಅವನು ನಡೆಯೋದು ನೋಡಿದ್ರೆ ಗೊತ್ತಾಗುತ್ತೆ ಅವನು ಈಗಷ್ಟೆ ಯಾರಿಂದಲೋ ಏನೋ ಕದ್ದು ತನ್ನ ಪಂಚೆಯಡಿಯಲ್ಲಿ ಮುಚ್ಚಿಟ್ಟುಕೊಂಡು ಹೋಗ್ತಾ ಇದ್ದಾನೆ ಅಂತಾ. ಅವನು ಮಾತಾಡೋದು ಸಹಾ ನೋಡು ಎಷ್ಟು ನಾಜೂಕಾಗಿ ಬೆಣ್ಣೆಯಿಂದಾ ಕೂದಲು ತೆಗೆದಂಗೆ!! ತನ್ನ ಮೇಲೆ ಅನುಮಾನವೇ ಬರದಂಗೆ ಎಲ್ಲರೊಟ್ಟಿಗೂ ಬೆರೆತುಕೊಂಡು ವ್ಯವಹರಿಸ್ತಾನೆ. ಕೆಲಸ ಏನುಮಾಡ್ತಾನೆ ಗೊತ್ತಿಲ್ಲ. ಅವನೇ ಕದ್ದು ನಾಲ್ಕು ಕಾಸಿಗೆ ಮಾರಿದ್ದಾನೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಈ ಸಲ ನನ್ನ ಹತ್ರ ಸಾಕ್ಷಿಯಿಲ್ಲ. ಮುಂದಿನ ಸಲ ಸಾಕ್ಷಿಸಮೇತ ಹಿಡಿದು ಹಾಕ್ತೀನಿ. ಅವತ್ತು ಇದನ್ನೂ ಸೇರಿಸಿ ಅವರ ಅಪ್ಪನಿಂದ ಎಲ್ಲವನ್ನೂ ವಸೂಲಿ ಮಾಡಿದ್ರಾಯ್ತು” ಅಂದ್ಕೊಂಡ. ಇದಾದ ಎರಡು ವಾರಕ್ಕೆ, ಬೇಲಿಬದಿಯಲ್ಲಿ ಅವನಿಗೆ ತನ್ನ ಕೊಡಲಿ ಸಿಕ್ಕಿತು.
.
.
ಅದಾದಮೇಲೆ ರೈತನಿಗೆ ಪಕ್ಕದಮನೆಯವನ ಮಗ ಕಳ್ಳನಂತೆ ಕಾಣಲಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s