ದಿನಕ್ಕೊಂದು ವಿಷಯ – ೨

ದಿನಕ್ಕೊಂದು ವಿಷಯ – ೨

ನರಕದ ದ್ವಾರ ಎಲ್ಲಿದೆ ಗೊತ್ತೇ!?

ಕುತೂಹಲದ ವಿಷಯವೆಂದರೆ, ನೀವು ಧರ್ಮದವರೇ ಆಗಿರಿ…..ನಿಮ್ಮಲ್ಲರಿಗೂ ಸ್ವರ್ಗ ಹಾಗೂ ನರಕದ ಬಗ್ಗೆ ತಿಳಿದಿರುತ್ತದೆ. ಸ್ವರ್ಗ, ಜನ್ನತ್, ಹೆವನ್, ಶಮಾಯಿಮ್, ತಿಯಾನ್ ಇವೆಲ್ಲವೂ ಒಂದು ಜೀವನದ ನಂತರ ಮಾನವ ತಲುಪಬಹುದಾದ ಎತ್ತರದ ಹಂತಗಳು. ಹಾಗೆಯೇ ನರಕ, ಜಹನ್ನುಮ್, ಹೆಲ್, ಜಿಹೋನಮ್ ಇವು ಮರಣಾನಂತರದ ಕೆಳಗಿನ ಹಂತಗಳು. ತಮಾಶೆಯೆಂದರೆ ಬರೀ ಸಾಹಿತ್ಯಿಕವಾಗಿ ಮೇಲೆ ಅಥವಾ ಕೆಳಗೆ ಇಲ್ಲ, ಅಕ್ಷರಶಃ (literally) ಇವೆ. ಅಲ್ಲ ಧರ್ಮಗಳಲ್ಲೂ ಸ್ವರ್ಗವೆನ್ನುವುದು ಭೂಮಿಗಿಂತ ಎತ್ತರದಲ್ಲಿ ಅಲ್ಲೇಲ್ಲೋ ಮೇಲೆ ಮೋಡಗಳ ಮೇಲೆ ಆಕಾಶದಲ್ಲಿ ಅಥವಾ ಅದಕ್ಕಿಂತಲೂ ಎತ್ತರದಲ್ಲಿ ಇದೆ. ನರಕವೆನ್ನುವುದು ಅಲ್ಲೆಲ್ಲೋ ಕೆಳಗೆ ಪಾತಾಳಕ್ಕಿಂತಲೂ ಕೆಳಗಿದೆ. ಅವುಗಳ ಹೆಸರುಗಳು ಬೇರೆ ಬೇರೆಯಾಗಿರಬಹುದು, ಆದರೆ ಅವುಗಳ ಪರಿಕಲ್ಪನೆ, ಅವುಗಳ ಅಗತ್ಯ, ಅವುಗಳ ವಾತಾವರಣ ಇವೆಲ್ಲವೂ ಎಲ್ಲಾ ಧರ್ಮದಲ್ಲೂ ಒಂದೇ. ಎಲ್ಲಾ ಸ್ವರ್ಗಗಳಲ್ಲಿಯೂ ಹಿತವಾದ ವಾತಾವರಣವಿದೆ, ಅಲ್ಲಿರುವ ಜನರು ಬೆಳಿಯ ಬಟ್ಟೆಗಳನ್ನು ಧರಿಸಿ ಸಂತೋಷದಿಂದಿದ್ದಾರೆ, ಅಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಆದರೆ ಎಲ್ಲಾ ನರಕಗಳಲ್ಲಿ ಸುಡುವ ತಾಪ, ಬೆಂಕಿಯುಗುಳುವ ನೆಲ, ಅಲ್ಲಿರುವ ಜನರು ಹರಕುಬಟ್ಟೆಗಳನ್ನ್ನು ಧರಿಸಿದ್ದಾರೆ, ಕಷ್ಟಕೋಟಲೆಗಳಿಂದ ನರಳುತ್ತಿದ್ದಾರೆ, ತಿನ್ನಲು ಊಟವಿಲ್ಲ, ಕುಡಿಯಲು ನೀರಿಲ್ಲ (ಹೆಚ್ಚುಕಡಿಮೆ ಎಲ್ಲಾ ನರಕಗಳು ಕಾಂಗ್ರೆಸ್ಸ್ ಆ‍ಡಳಿತ ಕಾಲದ ಗ್ರಾಮಗಳಂತೆ 😉 😛 ) ಅಲ್ಲೊಬ್ಬ ದೂತ ನಿಮ್ಮನ್ನು ಮಲಗಲೂ ಬಿಡದಂತೆ ಚಾಟಿಯಿಂದ ಹೊಡೆದು, ಶೂಲದಿಂದ ತಿವಿದು ಶಿಕ್ಷಿಸುತ್ತಾನೆ. ಕಾದ ಎಣ್ಣೆಯಲ್ಲಿ ನಿಮ್ಮನ್ನು ಎದ್ದಲಾಗುತ್ತದೆ ಇತ್ಯಾದಿ ಇತ್ಯಾದಿ….

ಸ್ವಲ್ಪ ಸೂಕ್ಷವಾಗಿ ಗಮನಿಸಿದರೆ ತಿಳಿಯುತ್ತದೆ, ಇದು ತಾತ್ವಿಕವಾಗಿ ತುಂಬಾ ಸುಂದರವಾದ ಒಂದು ಕಲ್ಪನೆ. ಸ್ವರ್ಗ ನರಕಗಳೆಂಬುವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೋ ಇಲ್ಲವೋ, ಆದರೆ ಸ್ವರ್ಗವೆನ್ನುವುದು ಒಂದು ಎತ್ತರದ ಪ್ರದೇಶ. ಎತ್ತರವೆಂದರೆ ಮಾನಸಿಕವಾಗಿ ನಾವು ಎತ್ತರಕ್ಕೇರಬೇಕು ಎಂದರ್ಥ. ಸಂಸಾರದ ಕೋಟಲೆಗಳಿಂದ ಎತ್ತರಕ್ಕೇರಬೇಕು. ಕಾಮ, ಕ್ರೋಧ ಮುಂತಾದ ಆರು ಗುಣಗಳನ್ನು ಹಿಂದಿಕ್ಕಿದಾಗ ನಾವು ಮೇಲೇರಿ ತಲುಪುವ ಹಂತವೇ ಸ್ವರ್ಗ. ಅಲ್ಲಿಗೆ ತಲುಪಿದ ಮೇಲೆ ನಿಮ್ಮನ್ನು ಕಾಡಲು ಏನೂ ಇಲ್ಲ. ಅಲ್ಲಿರುವುದು ಬರೀ ಸಂತೋಷ.

ಅದೇ ನೀವು ಜೀವನದಲ್ಲಿ ಪಾಪಗಳನ್ನು ಮಾಡಿದ್ದರೆ (ಪಾಪದ ಡೆಫಿನಿಶನ್ ಬಗ್ಗೆ ನಾನಿಲ್ಲಿ ಹೇಳಲು ಹೋಗುವಿದಿಲ್ಲ) ಕೊನೆಗಾಲದಲ್ಲಿ ಆ ಪಾಪಗಳು ಹಾಗೂ ಅದರಿಂದ ಉತ್ಪನ್ನವಾಗುವ ತಪ್ಪಿತಸ್ಥ ಭಾವನೆ(guilt) ನಿಮ್ಮನ್ನು ಕೆಳಗೆಳೆಯುತ್ತವೆ. ಅವುಗಳಿಂದ ನಿಮ್ಮ ಮನಸ್ಸು ಕುದಿಯತೊಡಗುತ್ತದೆ. ಆ ತಪ್ಪಿತಸ್ಥ ಮನೋಭಾವ ನಿಮಗೆ ಮಲಗಲು ಬಿಡುವುದಿಲ್ಲ. ಕೂರಂಬಿನಂತೆ ಚುಚ್ಚುತ್ತದೆ. ನಿಮ್ಮ ಇಪ್ಪತ್ಮೂರನೆಯ ವಯಸ್ಸಿನಲ್ಲಿ ನೀವು ಜೋರಾಗಿ ಬೈಕ್ ಓಡಿಸುವ ಉತ್ಸಾಹದಲ್ಲಿ ನಡೆದ ಅಪಘಾತದಲ್ಲಿ ಒಂದು ಮಗುವಿನ ಕಾಲು ಮುರಿದು ಆ ಮಗು ತನ್ನ ಜೀವನ ಪರ್ಯಂತ ನಡೆಯಲಾಗದಂತಾದ ಘಟನೆ, ಆ ಕೇಸಿನಿಂದ ನಿಮಗೆ ಸುಲಭವಾಗಿ ಕೋರ್ಟಿನಿಂದ ಕ್ಷಮೆ ದೊರೆತಿದ್ದರೂ, ನಿಮ್ಮನ್ನು ಸುಪ್ತಮನಸ್ಸಿನ ಮೂಲಕ ಕಾಡುತ್ತದೆ. ಆ ಮಗು ಅದೆಷ್ಟು ಕಷ್ತಪಟ್ಟಿತೋ ಪಾಪ ಎಂಬ ಪಾಪಪ್ರಜ್ಞೆ ಮನಸ್ಸಿನಲ್ಲಿ ಕಾದಎಣ್ಣೆಯಂತೆ ಮರಳಿ ಮರಳಿ ಸುಡುತ್ತದೆ. ಇಷ್ಟೆ ನರಕದ ಕಲ್ಪನೆಯ ಹಿಂದಿರುವ ಸೂಕ್ಷ್ಮ (ನನ್ನ ಪ್ರಕಾರ)

ಇರಲಿಬಿಡಿ….ವಿಷಯ ಇದಲ್ಲ. ನಾನು ಹೇಳಹೊರಟಿರುವುದು ಭೂಮಿಯ ಮೇಲಿರುವ ಒಂದು ಜಾಗದ ಬಗ್ಗೆ. ಅದನ್ನು ಅಲ್ಲಿಯ ಸ್ಥಳೀಯರು ‘ನರಕದ ದ್ವಾರ’ ಎಂದೇ ಕರೆಯುತ್ತಾರೆ. ಸಮಾಧಾನದ ವಿಷಯವೆಂದರೆ, ಅಲ್ಲೇನೂ ನರಕವಿಲ್ಲ ಹಾಗೂ ಮರಣಾನಂತರ ನಮ್ಮನ್ನು ಅಲ್ಲಿಗೆ ಕಳಿಸಲಾಗುವುದೂ ಇಲ್ಲ. ಆದರೆ ಅಲ್ಲಿ ನಿಜವಾಗಿಯೂ ನರಕಸದೃಶವಾದ ದೃಶ್ಯವೊಂದು ಕಾಣಸಿಗುತ್ತದೆ.

ನಾನು ಮಾತನಾಡುತ್ತಿರುವುದು, ತುರ್ಕ್ಮೇನಿಸ್ತಾನದಲ್ಲಿರುವ ಕರಾಕುಮ್ ಮರುಭೂಮಿಯ ನಡುವೆಯಿರುವ ದೆರ್ವೇಜೇ – Derweze (ಪರ್ಶಿಯನ್ ಭಾಷೆಯಲ್ಲಿ ಇದರರ್ಥ ಬಾಗಿಲು, ಹಿಂದಿಯ ದರ್ವಾಝಾ ಇದ್ದಂತೆ) ಎಂಬ ಪುಟ್ಟಹಳ್ಳಿಯ ಬಗ್ಗೆ. ಆ ದಿನಗಳಲ್ಲಿ ಈ ಜಾಗ ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದ್ದ ನೈಸರ್ಗಿಕ ಅನಿಲದ ನಿಕ್ಷೇಪಕ್ಕೆ ಪ್ರಸಿದ್ಧವಾಗಿತ್ತು. 1971ರಲ್ಲಿ ರಷ್ಯನ್ ಭೂಗರ್ಭಶಾಸ್ತ್ರಜ್ಞರು ಅನಿಲಹೊರತೆಗೆಯಲು ನೆಲಕೊರೆಯುವಾಗ ಏನೋ ಹೆಚ್ಚುಕಮ್ಮಿಯಾಗಿ ರಿಗ್ ನ ಕೆಳಗಿರೋ ಭೂಮಿ ಕುಸಿದು ಸುಮಾರು 70 ಮೀಟರ್ (230 ಅಡಿ) ಅಗಲದ ಭಾರೀ ಹೊಂಡವೊಂದು ನಿರ್ಮಾಣವಾಯಿತು. ಅಲ್ಲಿ ನೆಲ ಭದ್ರವಾಗಿಲ್ಲ ಎಂದು ಅರಿತ ರಷ್ಯನ್ನರು ತಮ್ಮ ಪ್ರಯತ್ನವನ್ನು ಅಲ್ಲಿಗೇ ಕೈಬಿಟ್ಟರು. ಆದರೆ, ಅದಾಗಲೇ ಭೂಮಿಯಿಂದ ಅನಿಲ ಸೋರಿಕೆ ಪ್ರಾರಂಭವಾಗಿತ್ತು. ಅದಕ್ಕೊಂದು ಗತಿ ಕಾಣಿಸಲು ಸೋರುತ್ತಿದ್ದ ಅನಿಲಕ್ಕೆ ಬೆಂಕಿಯಿಕ್ಕಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಅವರ ಲೆಕ್ಕಾಚಾರದ ಪ್ರಕಾರ, ಸೋರುತ್ತಿರುವ ಅನಿಲವೆಲ್ಲಾ ಒಂದೆರಡು ದಿನದಲ್ಲಿ ಉರಿದು ಹೋಗಬೇಕಿತ್ತು. ಆದರೆ ಈ ಪ್ರಯತ್ನ ‘ಗಣೇಶನ್ನ ಮಾಡೋಕ್ ಹೋಗಿ ಅವರಪ್ಪನ್ನ್……’ ಅನ್ನೋತರಾ ಪೂರ್ತಿ ಉಲ್ಟಾ ಹೊಡೆದು, ಉರಿಯುವುದನ್ನು ಮುಂದುವರಿಸಿತು. ಅಂದು ಹತ್ತಿದ ಬೆಂಕಿ 43 ವರ್ಷಗಳಿಂದ ಇಂದಿನವರೆಗೂ ಉರಿಯುತ್ತಲೇ ಇದೆ!!!! ಬೆಂಕಿಯ ತೀವ್ರತೆ ಇಂದಿಗೂ ಅಷ್ಟೇ ಇದೆ!!! ಇಂದು ಆ ಜಾಗವನ್ನು ಅಲ್ಲಿನ ಸರ್ಕಾರ ಪ್ರವಾಸಿತಾಣವಾಗಿ ಮಾರ್ಪಾಡಿಸಿದೆ. ಅಲ್ಲಿಗೆ ಹೋಗಿ ನರಕದಂತಾ ಶಾಖದ ಅನುಭೂತಿ ಪಡೆದು ಬರಬಹುದು. ಭಾರತೀಯರಿಗೆ ವೀಸಾ ಕೊಡಲು ತುರ್ಕ್ಮೇನಿಸ್ಥಾನ ನೂರಾರು ತರಹದ ನಿರ್ಬಂಧಗಳಿರುವುದರಿಂದ ನಮಗೆ ನಿಮಗೆ ಅಲ್ಲಿಗೆ ಹೋಗುವುದು ದೊಡ್ಡ ತಲೇಬಿಸಿ ಕೆಲಸ. ಹಾಗಾಗಿ ಸಧ್ಯಕ್ಕೆ ‘ಗೂಗಲ್ ಬಾಬಾ’ ಅವರ ಕೃಪೆಯಿಂದ, ಈ ಜಾಗದ ದರ್ಶನಭಾಗ್ಯವನ್ನು ನಮ್ಮ ನಿಮ್ಮ ತೆರೆಯಮೇಲೆಯೇ ಪಡೆಯಬೇಕಾಗಿ ವಿನಂತಿ. ಗೂಗಲ್ ಮ್ಯಾಪಿನ ಸಹಾಯದಿಂದ ಈ ಜಾಗವನ್ನು ನೋಡಬೇಕಾದಲ್ಲಿ ಈ ಅಕ್ಷಾಂಶ-ರೇಖಾಂಶ ಮಾಹಿತಿಯನ್ನು ಉಪಯೋಗಿಸಿ 40° 15′ 9.48″ N, 58° 26′ 21.93″ E

ಕೊಸರು:
ಈ ಹಳ್ಳಿಯ ಸುತ್ತಮುತ್ತ ‘ತೆಕೆ’ ಎಂಬ ಬುಡಕಟ್ಟಿನ ಜನರು ನೆಲೆಸಿದ್ದರು. ಅವರು ತಮ್ಮ ಪೂರ್ವಜರಂತೆಯೇ ಅರೆ-ಅಲೆಮಾರಿ ಜೀವನಕ್ರಮವನ್ನು ಅನುಸರಿಸಿಕೊಂಡು ಬದುಕುತ್ತಿದ್ದರು. 2004ರಲ್ಲಿ ಅಲ್ಲಿನ ರಾಷ್ಟ್ರಾಧ್ಯಕ್ಷ ‘ಪ್ರವಾಸೋಧ್ಯಮಕ್ಕೆ ದಕ್ಕೆ ತರುತ್ತಿದೆ’ ಎಂಬ ಕಾರಣವನ್ನೊಡ್ಡಿ ಆ ಹಳ್ಳಿಯನ್ನು ತೆರವುಮಾಡಿಸಿ ಆ ಜನರನ್ನು ಅಲ್ಲಿಂದ ಓಡಿಸಿದ. ಅಲ್ಲಿಗೆ ದೆರ್ವೇಜೇ ನಿಜವಾಗಿಯೂ ನರಕವಾಗಿ ಮಾರ್ಪಾಡಾಯಿತು.

tumblr_n15h0yMmsS1tq11emo1_1280 The-Door-to-Hell X8dyX 4803934469_e4625189d0

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s