ಗಣೇಶ ಹಬ್ಬವೆಂದರೆ ಬರೀ ಚಂದಾ, ಫಿಲಂ ಹಾಡುಗಳು, ಡಿಸ್ಕೋಡ್ಯಾನ್ಸ್ ಅಷ್ಟೇನಾ?

ದೇವರ ಬಗ್ಗೆ ನನ್ನ ಧೋರಣೆಗಳೇನೇ ಇದ್ದರೂ, ಹಬ್ಬಗಳ ಬಗೆ ನನ್ನ ನಂಬಿಕೆ ಅಚಲ. ಹಬ್ಬಗಳು ನಾಗರೀಕತೆಯೊಂದರ ಹಿರಿಮೆಯ ಧ್ಯೋತಕ. ಒಂದು ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುವ ಕಂಬಗಳಿದ್ದಂತೆ. ನಿಮ್ಮ ಮನೆಗೆ ಯಾರಾದರೂ ಗಣಪತಿ ಚಂದಾ ಕೇಳಲಿಕ್ಕೆ ಬಂದರೆ, ಪ್ರಶ್ನೆ ಕೇಳಿ…..ಖಂಡಿತಾ ಕೇಳಿ. ಆದರೆ ಗಣೇಶನಿಗೆ ಸರ್ಜರಿ ಮಾಡಿದವರ್ಯಾರು ಅಂತಾ ಕೇಳೋ ಬದಲು ಈ ಕೆಳಗಿನ ಪ್ರಶ್ಬೆಗಳನ್ನು ಕೇಳಿ ಅಥ್ವಾ ಈ ಸಲಹೆಗಳನ್ನು ಕೊಡಿ:

 

‘ನೋಡ್ರಪ್ಪ……

(೧) ರಾತ್ರಿ ಹತ್ತಕ್ಕೆ ದಯವಿಟ್ಟು ಕಾರ್ಯಕ್ರಮಗಳನ್ನು ಮುಗಿಸಿಬಿಡಿ,
(೨) ಬೆಳಗ್ಗೆ ಆರೂವರೆ ಏಳಕ್ಕೆಲ್ಲಾ ಮುಂಚೆ ಮೈಕ್ ಹಾಕಿ ಎಬ್ಬಿಸಬೇಡಿ,
(೩) ಶಾಮಿಯಾನ ಹಾಕಲಿಕ್ಕೆ ಸಾರ್ವಜನಿಕ ರಸ್ತೆಯನ್ನು ಅಗೆಯಬೇಡಿ,
(೪) ನಿಮ್ಮಲ್ಲಿ ಸಂಜೆ ಮನಂಜನಾ ಕಾರ್ಯಕ್ರಮ ಮಾಡಿಸೋ ಐಡಿಯಾ ಇದ್ರೆ, ನಮ್ಮ ಏರಿಯಾ ಮಕ್ಕಳಿಗೇ ಮೊದಲ ಆದ್ಯತೆ ಕೊಡಿ. ಅಥ್ವಾ ಒಂದು ದಿನ ಅವರದೇ ಕಾರ್ಯಕ್ರಮ ಮಾತ್ರ ಇಡಿ,
(೫) ಆ ಮೂರನೇ ಕ್ರಾಸ್ ಮಹದೇವಪ್ಪ ಅವರು ಮೊನ್ನೆ ಉತ್ತಮ ಶಿಕ್ಷಕ ಅಂತಾ ರಾಜ್ಯಪ್ರಶಸ್ತಿ ತಗೊಂಡ್ರು, ಮತ್ತೆ..ಆ ಕೊನೇ ಮೈನ್ರೋಡಿನಲ್ಲಿರೋ ಉದ್ದದ ಹುಡುಗ ಮೊನ್ನೆ ರಾಷ್ಟಮಟ್ಟದ ಲಾಂಜ್ ಜಂಪಿನಲ್ಲಿ ಬೆಳ್ಳಿ ಪದಕ ಗೆದ್ನಂತೆ. ಅವರಿಬ್ರಿಗೂ ಒಂದೊಂದು ಸನ್ಮಾನ ಇಡಿ
(೬) ಅನ್ನಸಂತರ್ಪಣೆಯೇನಾದರು ಏನಾದರೂ ಇದ್ದರೆ, ಅನ್ನ ವೇಸ್ಟ್ ಮಾಡಬೇಡಿ,
ಊಟ ಉಳಿದರೆ ನೋಡಿ ಈ ನಂಬರ್ರಿಗೆ ಫೋನ್ ಮಾಡಿ. ಅದೊಂದು ಮಕ್ಕಳ ಹಾಗೂ ಹಿರೀಜೀವಗಳ ಆಶ್ರಮ. ಅವರು ಬಂದು ತಗೊಂಡು ಹೋಗ್ತಾರೆ,
(೭) ಮತ್ತೆ…ಹೇಗಿದ್ದರೂ ನಿಮಗೆ ಕಾರ್ಯಕ್ರಮದ ಖರ್ಚಿಗೆ ಚಂದಾ ನಾವೆಲ್ಲಾ ಕೊಡ್ತಾ ಇದ್ದೀವಿ. ಆದ್ದರಿಂದ ನಿಮ್ಮ ಗಣೇಶನ ಕಾಣಿಕೆಡಬ್ಬದ ಬದಲು ಈ ಸಲ ಈ ಅನಾಥಾಶ್ರಮದ ಹೆಸರಿನಲ್ಲಿ ಒಂದು ಡಬ್ಬ ಇಡಿ. ಅದರಿಂದ ಸಿಗುವ ದುಡ್ಡನ್ನು ಅವರಿಗೆ ಕೊಡಿ. ಗಣೇಶನೂ ಸಂತುಷ್ಟನಾಗ್ತಾನೆ.’

ಎನ್ನುವ ಈ ರೀತಿಯ ಸಲಹೆಗಳನ್ನು ನೀಡಿ. ಇದು ನಿಜವಾದ ಸಮಾಜ ಕಾಳಜಿ. ಸಮಾಜವನ್ನು ಅದರ ಓಟವನ್ನು ಗುರುತಿಸಿಕೊಂಡು ಅದರಿಂದ ರಸ ತೆಗೆಯುವ ವಿಧ್ಯೆ ಗೊತ್ತಿರಬೇಕು. ಸಮಾಜವನ್ನು ವಿರೋಧಿಸಿ, ಅದರಲ್ಲಿರುವವರನ್ನೆಲ್ಲಾ ಮೂರ್ಖರೆಂದು ಕರೆದು ತನ್ನನ್ನು ಸಮಾಜವಾದಿಯೆಂದು ಕರೆದುಕೊಳ್ಳುವುದಲ್ಲ ಅಂತಾ ನನ್ನ ಬಲವಾದ ನಂಬಿಕೆ. ಇದೇ ತರಹ ಇನ್ಯಾವುದಾದರೂ ಐಡಿಯಾಗಳಿದ್ರೆ ದಯವಿಟ್ಟು ಹಂಚಿಕೊಳ್ಳಿ. ನಮ್ಮ ಗುಂಪಿನಲ್ಲಿ ಯಾರಾದ್ರೂ ಗಣೇಶ ಕೂರಿಸುವವರಿದ್ರೆ ಅವರಿಗೆ ಸಹಾಯವಾಗುತ್ತೆ. ಏನಂತೀರಾ?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s