ಸಾರ್ಕ್ ಮಾತುಕತೆಯಡಿಯಲ್ಲಿ ಚೀನಾಕ್ಕೆ ಬೆವರಿಳಿಸಿದ ಮೋದಿ

e0b2aee0b38be0b2a6e0b2bf

ವ್ಯವಹಾರವಲಯದಲ್ಲಿ ಒಂದು ಪದವಿದೆ “ಫರ್ಸ್ಟ್ ಮೂವರ್ಸ್ ಅಡ್ವಾಂಟೇಜ್” ಎಂದು. ಕನ್ನಡದಲ್ಲಿ ಸಡಿಲವಾಗಿ ‘ಮೊದಲ ನಡೆ ನಡೆಸುವವನಿಗಾಗುವ ಲಾಭ’ ಎಂದು ಅನುವಾದಿಸಬಹುದು. ಅಂದರೆ ಯಾರು ಮೊದಲ ಹೆಜ್ಜೆ ಇಡ್ತಾನೋ ಅವನಿಗೆ ಕೆಲವು ಅನುಕೂಲಗಳು/ಹೆಚ್ಚು ಅವಕಾಶಗಳು ಒದಗಿಬರುತ್ತದೆ. ಚೆಸ್ ಆಟದಲ್ಲಿ ಬಿಳಿಕಾಯಿ ನಡೆಸುವವನಿಗೆ ಮೊದಲ ತಂತ್ರವನ್ನು ಹೂಡಲು ಅವಕಾಶಸಿಗುವುದಿಲ್ಲವೇ? ಹಾಗೆ. ಕಪ್ಪುಕಾಯಿ ನಡೆಸುವವನಿಗೂ ತನ್ನದೇ ಆದ ತಂತ್ರ ಹೂಡುವ ಅವಕಾಶವಿದ್ದರೂ,ಅದು ಬಿಳಿಕಾಯಿಯವನ ನಡೆಗಳ ಮೇಲೆಯೇ ಅವಲಂಬಿತವಾಗುವ ಸಾಧ್ಯತೆಗಳೂ ಹೆಚ್ಚು. ಆ ಆಟಗಾರ ಬಿಳಿಕಾಯಿಗಳ ನಡೆಯನ್ನು ಅನುಸರಿಸುತ್ತಾ, ತನ್ನ ಕಾಯಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತನಾಗುತ್ತಾನೆ. ಹಾಗೆಯೇ ವ್ಯವಹಾರ ಕ್ಷೇತ್ರದಲ್ಲಿ,ಮೊದಲ ನಡೆ ನಡೆಸುವವನಿಗೆ ಬಹಳಷ್ಟು ಅನುಕೂಲಗಳು ಒದಗಿಬರುತ್ತವೆ. ಮೊತ್ತ ಮೊದಲನೆಯದಾಗಿ, ಆತನಿಗೆ ಸ್ಪರ್ದಿಗಳೇ ಇರುವುದಿಲ್ಲ. ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸುಲಭ ಅವಕಾಶ. ಒಮ್ಮೆ ಪ್ರಾಬಲ್ಯ ಸಾಧಿಸಿದರೆ,ಆತನ ಉತ್ಪನ್ನ ಉತ್ಕೃಷ್ಟಮಟ್ಟದ್ದಾಗಿದ್ದರೆ, ಬೇರೆ ಏನೂ ಮಾಡದೆ ವರ್ಷಾನುಗಟ್ಟಲೇ ಲಾಭವನ್ನು ಆನಂದಿಸಬಹುದು.

ಆದರೆ, ಖಂಡಿತವಾಗಿಯೂ ಲಾಭವಿದ್ದ ಮೇಲೆ ನಷ್ಟವಿದ್ದೇ ಇರುತ್ತದೆ. ಮೊದಲ ನಡೆ ನಡೆಸುವವನಿಗೆ ಅಗಾಧ ಧೈರ್ಯ ಬೇಕಾಗುತ್ತದೆ. ಅ ನಿಯಂತ್ರಿತ ಅಪಾಯ (ರಿಸ್ಕ್) ತೆಗೆದುಕೊಳ್ಳಬೇಕಾಗುತ್ತದೆ. ನಡೆಯಲ್ಲಿ ಸ್ವಲ್ಪವೇ ಎಡವಿದರೂ, ಅಪಾರ ನಷ್ಟಕ್ಕೀಡಾಗುತ್ತಾನೆ. ಇನ್ನೊಮ್ಮೆ ಎದ್ದು ನಿಲ್ಲಲೂ ಸಾಧ್ಯವಾಗದಷ್ಟು ವ್ಯವಹಾರ ಕುಸಿಯಬಹುದು. ನಿಯಂತ್ರಿತ ರಿಸ್ಕ್ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ನಡೆ ನಡೆಸುವವನೇ ಚಾಣಾಕ್ಷ ಮತಿ. ಮೋದಿ ತನ್ನ ಮೊದಲ ನಡೆಯಲ್ಲಿ ಎಷ್ಟೊಂದು ಹಕ್ಕಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ ಎಂದು ಇನ್ನೂ ಅರಿತಿಲ್ಲದವರಿಗಾಗಿ ಇದೊಂದು ಸಣ್ಣಪ್ರಯತ್ನ:

ಭಾರತ ದಕ್ಷಿಣ-ಪೂರ್ವ ಏಷ್ಯಾದಲ್ಲಿ ಭಾರೀ ತೂಕದರಾಷ್ಟ್ರ (regional heavyweight). ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಚೀನಾವನ್ನು ಬದಿಗಿಟ್ಟರೆ ತನ್ನ ಆರ್ಥಿಕ, ವೈಜ್ನಾನಿಕ ಹಾಗೂ ಸೈನಿಕ ಬಲದಿಂದ ಉಳಿದವರನ್ನು ಅಲುಗಿಸಬಲ್ಲದಷ್ಟು ಪ್ರಭಾವಿ. ಭಾರತ ತನ್ನ ಭಾರವನ್ನು ಉಳಿದವರ ಮೇಲೆ ಹೇರಿ ಯಾರನ್ನೂ ಹೆದರಿಸಲು ಪ್ರಯತ್ನಿಸಿಲ್ಲವಷ್ಟೆ. ಅದನ್ನು ಮಾಡಿದಲ್ಲಿ ನೆರೆಯ ರಾಷ್ಟ್ರಗಳನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದರೆ ಭಾರತದ ಯಾವ ಸರ್ಕಾರವೂ ನೆರೆಯವರನ್ನು ಎಂದೂ ಹೆದರಿಸಿಲ್ಲ ಅಥವಾ ಅಕ್ರಮಣ ಮಾಡಿಲ್ಲ.ಬದಲಿಗೆ ಅದು ಎಲ್ಲರನ್ನೂ ಸ್ನೇಹಿತರೆಂದು ಪರಿಗಣಿಸಿ ಅವರಿಗೆ ಸಹಾಯ ಮಾಡಿದೆ.ಬೇರೆ ದೇಶಗಳು ನಮ್ಮ ಸಹಾಯವನ್ನು ಅದೇ ರೂಪದಲ್ಲಿ ಹಿಂದೆ ಕೊಟ್ಟಿಲ್ಲ, ಅದು ಬೇರೆ ಮಾತು ಬಿಡಿ. ಆದರೆ ಮೋದಿ ತನ್ನೆಲ್ಲಾ ನೆರೆರಾಷ್ಟ್ರಗಳನ್ನು ತನ್ನ ಮೊದಲ ದಿನದ ಕಾರ್ಯಕ್ರಮಕ್ಕೇ ಆಹ್ವಾನಿಸುವ ಮೂಲಕ, ಸ್ನೇಹ ಹಸ್ತವನ್ನು ಚಾಚಿದ್ದಾರೆ. ಮೇಲ್ನೋಟಕ್ಕೆ ಇದು ಬರೀ ಸ್ನೇಹ ಹಸ್ತದಂತೆ ಕಂಡರೂ,ಒಂದು ಮಟ್ಟಕ್ಕೆ ಕೆಳಗಿಳಿದು ನೋಡಿದಾಗ, ಮೋದಿ ಸತ್ತು ಹೋಗಿರುವ ಸಾರ್ಕ್ ಒಕ್ಕೂಟದಲ್ಲಿ ಒಂದು ಸಂಚಲನ ಮೂಡಿಸಿದ್ದಾರೆ ಎಂದು ತಿಳಿಯುತ್ತದೆ. ಅದರೊಂದಿಗೇ ‘ಈ ಏರಿಯಾದಲ್ಲಿ ಬಾಸ್ಯಾರು!?’ ಎಂದು ತೋರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ನಂತರ ನಡೆದ ಹಲವಾರು ಚರ್ಚೆಗಳಲ್ಲಿ,ಅಧ್ಯಕ್ಷರ ಮಾತುಗಳಲ್ಲಿ ಈ ವಿಷಯ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ತಮಿಳರ ವಿರೋಧದ ನಡುವೆಯೂ ಶ್ರೀಲಂಕಾದ ಅಧ್ಯಕ್ಷನನ್ನು,ಹಲವಾರು ಬುದ್ದಿ(ಇರದ)ಜೀವಿಗಳ ಗೊಣಗಾಟದ ನಡುವೆಯೂ ಪಾಕಿಸ್ತಾನವನ್ನು ಆಹ್ವಾನಿಸುವ ಮೂಲಕ ಮೋದಿ ತನ್ನ ವಿದೇಶಾಂಗ ನೀತಿಯ ರೂಪು ರೇಷೆಯನ್ನು ಎತ್ತಿ ತೋರಿಸಿದ್ದಾರೆ.

ಶ್ರೀಲಂಕಾ ಜೊತೆಗಿನ ಭಾಂಧವ್ಯವನ್ನು,ಕೆಲವು ಪ್ರಾದೇಶಿಕ ಪಕ್ಷಗಳು ಹಾಗೂ ನಾಯಕರನ್ನು ಸಂತೋಷಪಡಿಸುವುದಕ್ಕಾಗಿ ಕಡಿದುಕೊಂಡ ಭಾರತ ಸರ್ಕಾರ ಆ ಪ್ರದೇಶದಲ್ಲಿ ಚೀನಾ ಎಷ್ಟರ ಮಟ್ಟಿಗೆ ತನ್ನ ಪ್ರಾಬಲ್ಯ ಸಾಧಿಸಿತೆಂದು ನೋಡಲೂ ಮರೆಯಿತು.ಇದರ ಪರಿಣಾಮವಾಗಿ ಇಂದು ಚೀನಾ,ಲಂಕಾದ ಹಿಡಿತದಲ್ಲಿರುವ ಹಿಂದೂಸಾಗರದಲ್ಲಿ ಬಲಿಷ್ಟ ನೌಕಾ ಹಾಗೂ ವಾಯು ನೆಲೆಗಳನ್ನು ಸ್ಥಾಪಿಸಿದೆ. ಒಂದು ವೇಳೆಯೇನಾದರೂ ಭಾರತ ಮತ್ತು ಚೀನಾದ ನಡುವೆ ಯುದ್ದ ಸಂಭವಿಸಿದರೆ, ನಾವು ಕೇವಲ ಈಶಾನ್ಯದಿಂದ ಮಾತ್ರವಲ್ಲ, ದಕ್ಷಿಣದಿಂದಲೂ ಚೀನಾವನ್ನುಎದುರಿಸಬೇಕಾಗುತ್ತದೆ. ವರ್ಷಕ್ಕೆ 3 ಶತಕೋಟಿ ಡಾಲರ್ ಮೊತ್ತದ ಮುಕ್ತ ವ್ಯಾಪಾರ ಒಪ್ಪಂದಗಳು ಎರಡು ದೇಶದ ನಡುವೆ ಇದೆ. 4 ಶತಕೋಟಿ ಡಾಲರ್ ಮೊತ್ತದಲ್ಲಿ ದೇಶದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು,ವಿಶೇಷ ಆರ್ಥಿಕ ವಲಯವನ್ನು, ದೇಶದ ಮೊದಲ ಚತುಷ್ಪತ ಹೆದ್ದಾರಿಯನ್ನುಚೀನಾ ರಾಜಾರೋಷವಾಗಿ ಕಟ್ಟುತ್ತಿದೆ. ಇವೆಲ್ಲವೇ ಚೀನಾದ ಸುಲಭಸಾಲ (soft loan)ಗಳಿಂದಲೇ ನಡೆಯುತ್ತಿರುವುದು. ಕಣ್ಣು ಮಿಟುಕಿಸುವಷ್ಟರಲ್ಲಿ ಭಾರತ ಹಂಬಂಟೋಟದ ಬಂದರು ಹಾಗೂ ಆರ್ಥಿಕವಲಯ ನಿರ್ಮಾಣದ ಅವಕಾಶವನ್ನು ಕಳೆದುಕೊಂಡಿತು. ಇಂದು ಒಂದು ಶತಕೊಟಿ ಡಾಲರ್ಮೊತ್ತದ ಅದೇ ಗುತ್ತಿಗೆ 85% ಚೀನಾದ ಸಹಾಯ ಧನದ ಮೇಲೆ ನಡೆಯುತ್ತಿದೆ. ನಮ್ಮಿಂದ ಕೇವಲ ಒಂದು ಘಂಟೆಯ ಪ್ರಯಾಣ ದೂರದಲ್ಲಿರುವ ಲಂಕಾದ ದ್ವೀಪದ ಮೇಲೆ ಅದೆಷ್ಟೋ ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಚೀನಾ ಹಿಡಿತ ಸಾಧಿಸಿದೆ. ಹಿಂದೂ ಚೀನಾ ಭಾಯಿ-ಭಾಯಿಮರೆತು, ಲಂಕಾ ಚೀನಾ ಭಾಯಿ-ಭಾಯಿ ಆಗಿ ಹೋಗಿದೆ. ಇದನ್ನು ಕಾಲ ಸಂಪೂರ್ಣವಾಗಿ ಮೀರಿ ಹೋಗುವ ಮುನ್ನಸರಿ ಪಡಿಸಬೇಕೆಂದು ಮೋದಿ ಅರಿತಿದ್ದಾರೆ. ತನ್ನದೇ ಎನ್.ಡಿ.ಎಯ ವೈಕೋ ಹಾಗೂ ಭಾರತದ ಪ್ರಭಾವಿ ಮುಖ್ಯಮಂತ್ರಿಯಾದ ಜಯಲಲಿತಾರವರ ಬ್ಲಾಕ್ಮೈಲ್ ಅಥವಾ ವಿರೋಧಕ್ಕೆ ಕಿವಿಗೊಡದೇ ಮೋದಿ ತನ್ನ ನಡೆಯನ್ನು ನಡೆಸಿದ್ದಾರೆ.

ಯುದ್ದಾ ನಂತರದ ಅಫ್ಘಾನಿಸ್ತಾನ ನಮಗೆ ಬಹಳ ದೊಡ್ಡ ಆರ್ಥಿಕ ಅವಕಾಶವೂ ಹೌದು, ಹಾಗೆಯೇ ಮತ್ತೆನಿಧಾನವಾಗಿ ಚಿಗುರುತ್ತಿರುವ ಅಲ್-ಕೈದಾ ಬೆದರಿಕೆಯೂ ಹೌದು. ಅಮೇರಿಕಾವೇನೋ ಒಸಾಮನನ್ನು ಕೊಂದು ದೇಶವನ್ನು ತೊರೆಯುತ್ತಿದೆ. ಆದರೆ ಅಲ್-ಕೈದಾಇನ್ನೂಸತ್ತಿಲ್ಲ. ಮೋದಿಗೆದ್ದಒಂದುವಾರದಲ್ಲೇಭಾರತ ದದೂತಾವಸವನ್ನುಸ್ಪೋಟಿಸುವಮೂಲಕತನ್ನಇರುವಿಕೆಯನ್ನುಪ್ರಚುರಪಡಿಸಿದೆ. ಹಾಗೆಂದು ಅಪ್ಘಾನಿಸ್ಥಾದ ಜೊತೆ ನಾವು ಸಂಬಂದ ಕಡಿಯುವಂತೆಯೂ ಇಲ್ಲ. ಭಾರತ ಉದ್ಯಮಿಗಳುಅಲ್ಲಿರಸ್ತೆ, ಆಸ್ಪತ್ರೆ, ಮನೆಗಳನಿರ್ಮಾಣಕ್ಕಾಗಿಕೋಟಿಗಟ್ಟಲೆಡಾಲರ್ಗಳಗುತ್ತಿಗೆಗಳನ್ನುಗೆದ್ದಿದ್ದಾರೆ. ಆಫ್ಘಾನಿಸ್ತಾನಕ್ಕೆಸಮುದ್ರವ್ಯಾಪಾರಗಳಿಗೆಅನುಕೂಲವಾಗುವಂತೆ, ಇರಾನ್ಮೂಲಕ, 218ಕಿ.ಮೀಉದ್ದದಹೆದ್ದಾರಿಯನ್ನುಪೂರ್ಣಗೊಳಿಸಿಕೊಟ್ಟಿದ್ದೇಭಾರತ . ಭಾರತ ೀಯಚಲನಚಿತ್ರಗಳಿಗೆಅಫ್ಘಾನಿಸ್ತಾನ ನಿರ್ಲಕ್ಷಿಸಲಾಗದಮಾರುಕಟ್ಟೆ. ಇರಾನ್ಪೈಪ್-ಲೈನ್ಒಪ್ಪಂದಸಾಧ್ಯವಾದರೆ, ಅದು ಹಾದು ಬರುವುದು ಅಪ್ಘಾನಿಸ್ತಾನಿನ ಮೂಲಕವೇ. ಭಾರತ ದಮಧ್ಯಏಷ್ಹ್ಯಾವ್ಯವಹಾರಕ್ಕೆಹೆಬ್ಬಾಗಿಲುಈದೇಶ. ಕಂದಹಾರಿನಲ್ಲಿರುವಭಾರತ ದಪುಟ್ಟಮಿಲಿಟರಿನೆಲೆಯನ್ನುಬಲಪಡಿಸುವಮಾತುಕತೆಗಲುನಡೆದಿವೆ. ಭಾರತದ ಶಾಂತಿಪಡೆಗಳು ಅಲ್ಲಿ ಹೇಗಿದ್ದರೂ ಇವೆ. ಪಾಕಿಸ್ಥಾನವನ್ನುಹದ್ದುಬಸ್ತಿನಲ್ಲಿಡಲುಅಲ್ಲಿಭಾರತ ದಇರುವಿಕೆಅವಶ್ಯಕೂಡಾ. ಯುದ್ದಕಾಲದಲ್ಲಿಅಫ್ಘಾನಿಸ್ತಾನ ದಲ್ಲಿನವಾಯುನೆಲೆಗಳುಸಹಾಯಕ್ಕೆಬರಲಿವೆ. ಪಾಕಿಸ್ತಾನಕ್ಕೆ ತಲೆನೋವು ಉಂಟುಮಾಡಲು ಪಷ್ತೂನಿ ದಂಗೆಕೋರರನ್ನು ಬೆಳೆಸಿದ್ದೇ ಭಾರತ . ದೇಶದವಿಷಯಗಳಲ್ಲಿಅಮೇರಿಕಾದಬೆಂಬಲದೊಂದಿಗೆಪಾಕಿಸ್ತಾನ ನಡೆಸುತ್ತಿರುವ ಹಸ್ತಕ್ಷೇಪವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿರುವ ಹಮೀದ್ಕರ್ಝಾಯಿಗೆ  ಅಲ್ಲಿ ಸರ್ಕಾರ ನಡೆಸಲು ಮೋದಿಯ ಸಹಕಾರದ ದೊಡ್ಡ ಅಗತ್ಯವಿದೆ. ಆದ್ದರಿಂದಲೇಮೋದಿಯಕರೆಬಂದೊಡನೆ, ಅಫ್ಘಾನಿಸ್ತಾನ ದಲ್ಲಿಅಮೇರಿಕಾಅಧ್ಯಕ್ಷಬಂದಿಳಿದಿದ್ದರೂಅವನನ್ನುಭೇಟಿಯಾಗದೆಕರ್ಝಾಯಿಓಡೋಡಿಬಂದದ್ದು.

ಇನ್ನು ಪಾಕಿಸ್ತಾನದ ವಿಷಯಕ್ಕೆ ಬಂದರೆ, ಮೋದಿಯ ಆಹ್ವಾನ ಅನೂಹ್ಯ ರೀತಿಯಲ್ಲಿ ಕೆಲಸ ಮಾಡಿದೆ.ಚುನಾವಣಾ ಭಾಷಣಗಳಲ್ಲಿ ಪಾಕಿಸ್ತಾನದ ವಿರುದ್ದ ಹರಿಹಾಯ್ದಿದ್ದ ಮೋದಿ, 26/11ರ ಪಾಪಿಗಳಿಗೆ ಮತ್ತು ದಾವೂದನಂತ ಅಪರಾಧಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ಥಾನದ ನಿಲುವಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಮೋದಿ, ತನ್ನ ಕೈಗೆ ಅಧಿಕಾರ ಬಂದೊಡನೆ ಪಾಕಿಸ್ತಾನಕ್ಕೆ ನೇರವಾಗಿ ಬೆದರಿಕೆ ಹಾಕಬಹುದೆಂಬ ಎಲ್ಲಾ ವಿಶ್ಲೇಷಣೆಗಳಿಗೆ ವಿರುದ್ದವಾಗಿ ಸ್ನೇಹಹಸ್ತ ಚಾಚಿ, ಪಾಕ್ ಅಧ್ಯಕ್ಷನನ್ನು ಬರಮಾಡಿಕೊಂಡರು. ಯಾಕೆಂದರೆ ಮೋದಿಗೆ ಗೊತ್ತು, ಶಾಂತಿಯ ಪ್ರಯತ್ನ ಮಾಡದೇ ನೇರ ಚಕಮಕಿಗಿಳಿದರೆ ವಿಶ್ವಮಟ್ಟದಲ್ಲಿ ಪಾಕಿಸ್ತಾನಕ್ಕೆಅನುಕಂಪದ ಬೆಂಬಲ ದೊರೆಯಲಿದೆಯೆಂದು. ಅವಕಾಶವಾದಿ ಅಮೇರಿಕಾ ನಾಳೆ ‘ಭಾರತ ಶಾಂತಿಯ ಪ್ರಯತ್ನವನ್ನೇ ನಡೆಸದೆ ಆಕ್ರಮಣಕಾರಿ ನೀತಿಯನ್ನನುಸರಿಸುತ್ತಿರುವುದು ತಪ್ಪು’ ಎಂಬ ಹೇಳಿಕೆ ನೀಡಿ ಅರ್ಥಿಕವಾಗಿ ನಮ್ಮನ್ನು ಹಿಂದೆದೂಡಲು ಪ್ರಯತ್ನಿಸಬಹುದು. ಆದೂ ಅಲ್ಲದೆ ಮೋದಿ, ಪಾಕಿಗಳು ಶಾಂತಿ ಮಾತುಕತೆಯ ಅಹ್ವಾನ ನೀಡುವ ಮೊದಲೇ ತಾನೇ ಮೊದಲ ನಡೆನಡೆಸಿ ನೆರೆಯದೇಶವನ್ನು ಪೇಚಿಗೆ ಸಿಲುಕಿಸಿದ್ದಾರೆ. ಈ ಪೇಚಿನ ಕಾರಣಕ್ಕಾಗಿಯೇ ನವಾಜ್ಷರೀಫ್ ಅಹ್ವಾನಕ್ಕೆ ಉತ್ತರಿಸಲು ಎರಡು ದಿನಗಳಷ್ಟು ಕಾಲತಲೆಕೆಡಿಸಿಕೊಂಡದ್ದು.

ಮುಚ್ಚಿದ ಬಾಗಿಲ ಹಿಂದೆ ಇಬ್ಬರ ನಡುವೆ ಏನು ಮಾತುಕತೆ ನಡೆಯಿತೆಂದು ನನಗೆ ನಿಮಗೆ ಎಂದಿಗೂ ತಿಳಿಯುವುದಿಲ್ಲ. ಮೋದಿ ನೇರವಾಗಿಯೇ ಖಾರವಾದ ಮಾತುಗಳಿಂದ ಖಂಡಿಸಿರಬಹುದು. ಅಥವಾ ಸದಾ ಸೇನೆಯ ಒತ್ತಿಯಾಳಾಗಿರುವ ಪಾಕಿಸ್ತಾನದ ಅಧ್ಯಕ್ಷ ತಾನಾಗಿಯೇ ಮೋದಿಯೊಂದಿಗೆ ಶಾಂತಿ ಮಾತುಕತೆಗೆ ಮೊದಲ ಚರಣಹಾಡಿರಬಹುದು. ನೆನಪಿರಲಿ, ಇದೇ ನವಾಜ್ ಷರೀಫ್  ಹದಿನೈದು ವರ್ಷಗಳ ಹಿಂದೆ ಪರ್ವೇಝ್ ಮುಶ್ರಫ್ ನೇತೃತ್ವದಲ್ಲಿ ಸೇನೆಯ ವಿಪ್ಲವಕ್ಕೊಳಗಾಗಿ ಅಧಿಕಾರದಿಂದ ಹೊರಹಾಕಲ್ಪಟ್ಟವರು. ಪೂರ್ವದಲ್ಲಿ ಮುಹಾಜಿರಿಗಳು ಹಾಗೂ ಪಶ್ಛಿಮದಲ್ಲಿ ಭಾರತ ಪ್ರಾಯೋಜಿತ ಪುಷ್ತೂನಿ ಮತ್ತು ಬಲೂಚಿಗಳ ದಂಗೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆಉಸಿರಾಡುವ ಅಗತ್ಯವಿದೆ. ಆದ್ದರಿಂದ ರಾಜತಾಂತ್ರಿಕ ಶಾಂತಿ ಮಾತುಕತೆಯ ಅಗತ್ಯತೆ ನಮ್ಮಷ್ಟೇ ಪಾಕಿಸ್ಥಾನ ಅಧ್ಯಕ್ಷರಿಗೂ ಇದೆ.ತನ್ನ ಜನರಿಂದ ಶಾಂತಿದೂತನೆಂದು ಕರೆಯಿಸಿಕೊಂಡು, ಅವರಿಂದ ಮತ್ತೊಮ್ಮೆ ಆಯ್ಕೆಗೊಂಡು ಬಲಿಷ್ಟ ಸರ್ಕಾರ ರಚಿಸಿ ಸೇನೆಯನ್ನು ಸಂಪೂರ್ಣ ಹಿಡಿತಕ್ಕೆ ತರುವುದು ಅವರ ಆದ್ಯತೆ.ಆ ಕಾರಣಕ್ಕಾಗಿ ಅವರು ಮೋದಿಯೊಂದಿಗಾದರೂ, ಮನಮೋಹನನೊಂದಿಗಾದರೂ ಮಾತುಕತೆಗೆ ಸರಿ.

ಇಷ್ಟಲ್ಲದೆ, ಪಾಕಿಸ್ತಾನ ಮತ್ತು ಚೀನಾ ಬಹಳ ಹಳೆಯ ಸ್ನೇಹಿತರು. ಪಾಕಿಸ್ತಾನಕ್ಕೆ ಪರಮಾಣು ತಂತ್ರಜ್ಞಾನ ಕೊಟ್ಟಿದ್ದೇ ಚೀನಾ. ಹಾಗಾಗಿ, ಯುದ್ದಕಾಲದಲ್ಲಿ ಚೀನಾ ಉತ್ತರ ಹಾಗೂ ವಾಯುವ್ಯದಿಂದಲೂ ನಮ್ಮನ್ನು ಮುತ್ತಲಿದೆ. ಪ್ರಾದೇಶಿಕ ರಾಜಕಾರಣ ಸಮೀಕರಣದಲ್ಲಿ ಚೀನಾವನ್ನು ದುರ್ಬಲಗೊಳಿಸಲು ಪಾಕಿಸ್ತಾನಕ್ಕಿಂತಾ ಒಳ್ಳೆಯ ಸ್ನೇಹಿತ ಇನ್ನೊಬ್ಬ ನಮಗೆ ಸಿಗಲಿಕ್ಕಿಲ್ಲ. ಶಾಂತಿ ಹಾಗೂ ಆರ್ಥಿಕ ಒಪ್ಪಂದಗಳಿಂದ ಪಾಕಿಸ್ತಾನವನ್ನು ಓಲೈಸಿಕೊಳ್ಳುವುದರ ಮೂಲಕ ಪಾಕಿಸ್ತಾನವನ್ನು ಚೀನಾದ ತೆಕ್ಕೆಯಿಂದ ಹೊರತರುವುದು ಭಾರತದ ದೂರಾಲೋಚನೆಯ ಪಟ್ಟಿಯಲ್ಲಿ ಇರಲೇ ಬೇಕು.

ಮಾರಿಷಸ್ಸ್ ಹಾಗೂ ಮಾಲ್ಡೀವ್ಸ್ ಸಣ್ಣ ರಾಷ್ಟ್ರಗಳಾದರೂ ಸಹ, ಭಾರತಕ್ಕೆ ಸದಾ ವಿಧೇಯವಾಗಿದ್ದ ದೇಶಗಳು. ಬಹಳಷ್ಟು ಸಮಯ ಭಾರತ ಈ ದೇಶಗಳಿಗೆ ಸಹಾಯ ಮಾಡಿದೆ. ಮಾರಿಷಸ್ಸಿನಲ್ಲಿ ಬೆಳೆಯುತ್ತಿರುವ ಹವಾಲ ಹಾಗೂ ಕಪ್ಪು ಹಣದ ದಂದೆಯನ್ನು ತಹಬಂದಿಗೆ ತರುವುದು ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. 2-ಜಿ ಹಗರಣದಲ್ಲಿ ಹೊರಬಿದ್ದ ಪ್ರತಿಯೊಂದು ಸತ್ಯವೂ ಮಾರಿಷಸ್ಸಿನೆಡೆಗೆ ಮುಖಮಾಡಿನಿಂತದ್ದು ನಮ್ಮ ಮುಂದಿದೆ. ಸಧ್ಯಕ್ಕೆ ಸ್ವಿಸ್ ಬ್ಯಾಂಕುಗಳಮೇಲೆ ಕಣ್ಣಿಟ್ಟಿರುವ ಮೋದಿಯ ಮುಂದಿನ ನಡೆ ಮಾರಿಷಸ್ಸ್ ಹಾಗೂ ಮಾಲ್ಡೀವ್ಸ್ ಮೇಲೆ ಇರಲಿದೆ. ಇಷ್ಟೇ ಅಲ್ಲದೆ, ನಾವು ಶ್ರೀಲಂಕಾದ ರೀತಿಯಲ್ಲಿ ಮಾಲ್ಡೀವ್ಸ್ ಅನ್ನೂಸಹ ವರ್ಷಗಳ ಹಿಂದೆಯೇ ರಾಜತಾಂತ್ರಿಕವಾಗಿ ಚೀನಾಕ್ಕೆ ಕಳೆದುಕೊಂಡಿದ್ದೇವೆ. 2012ರಲ್ಲಿ ಚೀನಾದ ದೂತವಾಸ ಪ್ರಾರಂಭವಾದ ಒಂದೇ ತಿಂಗಳಲ್ಲಿ ಮಾಲ್ಡೀವ್ಸ್ ಚೀನಾದಿಂದ 500 ಮಿಲಿಯನ್ ಡಾಲರಿನಷ್ಟು ಆರ್ಥಿಕ ಸಹಾಯ ಪಡೆಯಿತು.ಇದಾದ ಆರೇ ತಿಂಗಳಲ್ಲಿ ಭಾರತೀಯ ಕಂಪನಿ ಜಿ.ಎಮ್.ಆರ್ ಮಾಲ್ಡೀವ್ಸಿನಲ್ಲಿ ಗೆದ್ದಿದ್ದ ಏರ್-ಪೋರ್ಟ್ ಗುತ್ತಿಗೆಯನ್ನು ಸರ್ಕಾರ ರದ್ದುಪಡಿಸಿತು. ಕಾಕತಾಳೀಯವೆಂದರೆ ಇದಕ್ಕೆ ಒಂದು ತಿಂಗಳ ಮುಂಚೆಯಷ್ಟೇ ಚೀನಾದ ರಕ್ಷಣಾ ಮಂತ್ರಿ ಮಾಲ್ಡೀವ್ಸಿಗೆ ಭೇಟಿ ನೀಡಿದ್ದರು ಹಾಗೂ ಮಾಲ್ಡೀವ್ಸಿನ ರಕ್ಷಣಾ ಹಾಗೂ ಸಾರಿಗೆ ಸಚಿವ ಆಗಷ್ಟೇ ಬೀಜಿಂಗಿನ ಪ್ರವಾಸ ಮುಗಿಸಿ ಬಂದಿದ್ದರು!!

ಇವನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡೇ ಮೋದಿ ಎಲ್ಲಾ ನಾಯಕರನ್ನು ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಮೊದಲದಿನವೇ ಕೆಲಸಕ್ಕೆ ತೊಡಗಿದ ಮೋದಿ, ಎಲ್ಲಾ ನಾಯಕರೊಂದಿಗೆ ಮಾತುಕತೆ ಪ್ರಾರಂಭಿಸುವ ಮೂಲಕ ಅತೀಮುಖ್ಯ ಅಂತರರಾಷ್ಟ್ರೀಯ ಸವಾಲುಗಳಿಗೆ ಕೀಲಿ ಕೊಟ್ಟಿದ್ದಾರೆ. ತನ್ನೆಲ್ಲಾ ವಿದೇಶಾಂಗ ಕಾರ್ಯದರ್ಶಿಗಳಿಗೆ ಮುಂದಿನ ಎರಡು ವರ್ಷಕ್ಕಾಗುವಷ್ಟು ಕೆಲಸವನ್ನು ಮೋದಿ ತನ್ನ ಒಂದೆರಡು ಘಂಟೆಗಳ ಕಾಲದ ಭೇಟಿಯಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಇಷ್ಟೆಲ್ಲದರ ಮಧ್ಯೆ ನಮ್ಮ ಸುಪ್ತ ವೈರಿಯಾದ ಚೀನಾಕ್ಕೆ ಕಂಪನದ ಸಂದೇಶಗಳನ್ನು ಕಳುಹಿಸಿದ್ದಾರೆ. ಬೇರೇನಲ್ಲದಿದ್ದರೂ, ಯುಪಿಎ-2ರ ಸಮಯದಲ್ಲಾದ ವಿದೇಶಾಂಗ ನೀತಿಯ ಪಾರ್ಶ್ವವಾಯುವನ್ನು ಮುಂದುವರೆಸುವುದಿಲ್ಲವೆಂಬ ಸೂಚನೆಯನ್ನು ಹೊರಹಾಕಿದ್ದಾರೆ.

ಇವೆಲ್ಲದರ ನಡುವೆ ಯಾರೂ ಗಮನಿಸದ ಇನ್ನೊಂದು ವಿಷಯವೆಂದರೆ ನಿವೃತ್ತ ಜನರಲ್ ವಿ.ಕೆ.ಸಿಂಗ್ ಅವರಿಗೆ ಎರಡು ವಿಚಿತ್ರ ಖಾತೆಗಳ ಮಿಶ್ರಣವನ್ನು ಕೊಟ್ಟಿರುವುದು. ಸಿಂಗ್ ಅವರು ಈಶಾನ್ಯ ಪ್ರದೇಶದ ಸ್ವತಂತ್ರ ರಾಜ್ಯಮಂತ್ರಿ ಹಾಗೂ ಸುಶ್ಮಾ ಸ್ವರಾಜ್ ಅವರ ಕೈಕೆಳಗೆ ವಿದೇಶಾಂಗ ರಾಜ್ಯಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ. ಅರುಣಾಚಲಪ್ರದೇಶವನ್ನು ಭಾರತದ ಭಾಗವೆಂದು ಒಪ್ಪಿಕೊಳ್ಳದ, ಅಲ್ಲಿ ಮಿಲಿಟರಿ ದರ್ಜೆಯ ರಸ್ತೆಗಳನ್ನು ನಿರ್ಮಿಸಿ ಟ್ಯಾಂಕರ್ ಹಾಗೂ ಸೇನೆಯನ್ನು ಸುಲಭವಾಗಿ ಹಾಗೂ ಅತಿವೇಗವಾಗಿ ಸಜ್ಜುಗೊಳಿಸುವ ಇರಾದೆಯಿದ್ದ ಚೀನಾಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಂತಹ ಸೂಕ್ಷ್ಮ ಪ್ರದೇಶಕ್ಕೆ ಓರ್ವ ಸೇನಾ ಅಧಿಕಾರಿಯನ್ನು ನಿಯೋಜಿಸುವ ಮೂಲಕ, ಜೊತೆಗೆ ಸಿಂಗ್ ಅವರಿಗೆ ವಿದೇಶಾಂಗ ಖಾತೆ ನೀಡುವ ಮೂಲಕ ಒಬ್ಬ ಬದ್ದ ಸೈನಿಕನನ್ನು ಮಾತುಕತೆಯ ಹೆಬ್ಬಾಗಿಲಾಗಿ ಮಾಡಿದ್ದಾರೆ ಹಾಗೂ ಚೀನಾಕ್ಕೆ ಚೀನಾಕ್ಕೆ ಒಂದು ಬಲಿಷ್ಟ ತಡೆಗೋಡೆಯನ್ನು ಮೋದಿ ಒಡ್ಡಿದ್ದಾರೆ. ಇನ್ನು ಚೀನಾ ಈಶಾನ್ಯದಲ್ಲಿ ಯಾವುದೇ ಸೇನಾ ಚಲನವಲನಗಳನ್ನು ಮಾಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗಲಿದೆ. ಚೀನಾದ ತಂತ್ರ ‘ಭಾರತವನ್ನು ಎಷ್ಟರಮಟ್ಟಿಗೆ ತುಳಿಯಬಹುದು?’ ಎಂದು ನೋಡುವುದಾಗಿತ್ತು. ನಮ್ಮ ಹಳೆಯ ಸರ್ಕಾರಗಳು ಮತ್ತದರ ಸವಕಲು ಮಂತ್ರಿಮಂಡಲ ‘ನಮ್ಮನ್ನು ನೀವು ಎಷ್ಟು ಬೇಕಾದರೂ ತುಳಿಯಬಹುದು’ ಎಂಬ ಸಂದೇಶವನ್ನು ರವಾನಿಸಿದ್ದವು. ಆದರೆ ಈಗ ಬರೀ ಒಂದು ಪಟ್ಟಿನಿಂದ ಎಲ್ಲವೂ ಬದಲಾಗಿದೆ.

ನಮ್ಮ ಸುತ್ತಮುತ್ತಲಿನ ಅವಕಾಶಗಳನ್ನು ಕಸಿದುಕೊಳ್ಳುವ ಕಾಲ ಇನ್ನು ಮುಗಿದಿದೆ. ನಾವಿನ್ನು ಸುಮ್ಮನೆ ಕೂರುವುದಿಲ್ಲ ಮಾತ್ರವಲ್ಲ, ನೀವು ನಮ್ಮಿಂದ ಕಸಿದುಕೊಂಡ ಕೆಲವು ಅವಕಾಶಗಳನ್ನು ಹಿಂತಿರುಗಿ ಪಡೆಯಲು ನಾವು ಸಜ್ಜು. ಮತ್ತು, ಎಷ್ಟೇ ತುಳಿದರೂ ತುಳಿಸಿಕೊಳ್ಳುವ ಸಮಯವೀಗ ಮುಗಿದಿದೆಯೆಂಬ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ. ಎಷ್ಟು ಮಂದಿ ಭಾರತೀಯರಿಗೆ ಇದು ಅರ್ಥವಾಗಿದೆಯೋ ಇಲ್ಲವೋ, ಬೀಜಿಂಗ್ ಮತ್ತು ವಾಷಿಂಗ್ಟನ್ನಿನ ಚತುರಮತಿಗಳಿಗೆ ಇದು ಅರ್ಥವಾಗಿರಬೇಕೆಂದು ನನ್ನ ಅನಿಸಿಕೆ. ಯಾವುದೇ ಪಕ್ಷಪಾತವಿಲ್ಲದೆ ಹೊರಗಿನಿಂದ ಇವೆಲ್ಲ ನೋಡುವ ಅವಕಾಶವಿರುವ ನನಗೆ ಇವೆಲ್ಲಾ ತುಂಬಾ ರೋಚಕ ಆಟದ ಹಂತದಲ್ಲಿ ಕಂಡುಬರುತ್ತಿದೆ. ನಿಜವಾಗಿಯೂ ‘ಅಚ್ಚೇ ದಿನ್ ಆನೇವಾಲೇ ಹೈಂ’

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s